ಗಾಂಧಿನಗರ: ಗುಜರಾತ್ನ ಕಚ್ ಜಿಲ್ಲೆಯ ಮಾದಾಪರ್ ಎಂಬ ಪುಟ್ಟ ಹಳ್ಳಿಯ ಜನರು ಬ್ಯಾಂಕ್ ಠೇವಣಿ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಧನೆ ಮೆರೆದಿದ್ದಾರೆ.
ಈ ಹಳ್ಳಿಯ ಜನರು 17 ಕ್ಕಿಂತ ಹೆಚ್ಚು ಬ್ಯಾಂಕ್ಗಳು, 7600 ಹೌಸಿಂಗ್ ಎಸ್ಟ್ಯಾಬ್ಲಿಷ್ಮೆಂಟ್ಗಳಲ್ಲಿ ಸುಮಾರು 5 ಸಾವಿರ ಕೋಟಿ ರೂ. ಗಳ ಠೇವಣಿ ಹೊಂದಿದ್ದಾರೆ. ಅಂದಾಜು ಪ್ರಕಾರ ಈ ಗ್ರಾಮದಲ್ಲಿ ಸರಾಸರಿ ತಲಾ ಠೇವಣಿ ಸುಮಾರು 15 ಲಕ್ಷ. ಅತ್ಯಂಚ ಶ್ರೀಮಂತ ಹಳ್ಳಿ ಎಂಬ ಖ್ಯಾತಿ ಪಡೆದಿರುವ ಈ ಹಳ್ಳಿಯಲ್ಲಿ ಹದಿನೇಳು ಬ್ಯಾಂಕುಗಳು, ಶಾಲೆ, ಪ್ರೌಢಶಾಲೆ, ಕಾಲೇಜುಗಳು, ಕೆರೆಗಳು, ಹಸಿರು, ಅಣೆಕಟ್ಟುಗಳು, ಆರೋಗ್ಯ ಕೇಂದ್ರಗಳು, ದೇವಾಲಯಗಳು ಈ ಹಳ್ಳಿಯಲ್ಲಿವೆ. ಹಾಗೆಯೇ ಈ ಗ್ರಾಮದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಗೋ ಶಾಲೆಯನ್ನು ಸಹ ನಾವು ಕಾಣಬಹುದಾಗಿದೆ.
ಈ ಗ್ರಾಮ ಭಾರತದ ಇತರ ಸಾಂಪ್ರದಾಯಿಕ ಗ್ರಾಮಗಳಿಂದ ಭಿನ್ನವಾಗಿದೆ. ಇಲ್ಲಿನ ಹೆಚ್ಚಿನ ಗ್ರಾಮಸ್ಥರ ಕುಟುಂಬ ವರ್ಗ ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರು ಆ ದೇಶಗಳಲ್ಲಿ ದುಡಿದ ಸಂಪತ್ತನ್ನು ದೊಡ್ಡ ಪ್ರಮಾಣದಲ್ಲಿ ತಮ್ಮ ಕುಟುಂಬಗಳಿಗೆ ಕಳುಹಿಸುತ್ತಾರೆ. ಹಾಗೆಯೇ ವಿದೇಶಕ್ಕೆ ತೆರಳಿ ಕೊಂಚ ಸಂಪತ್ತು ಕ್ರೋಢೀಕರಿಸಿ, ಬಳಿಕ ತಮ್ಮ ಹಳ್ಳಿಗೆ ಮರಳಿ ಉದ್ಯಮ ಆರಂಭಿಸಿರುವವರನ್ನೂ ನಾವು ಈ ಹಳ್ಳಿಯಲ್ಲಿ ಕಾಣಬಹುದಾಗಿದೆ.
ಇನ್ನು 1968 ರಲ್ಲಿ ಲಂಡನ್ನಲ್ಲಿ ಮಾದಾಪರ್ ವಿಲೇಜ್ ಅಸೋಸಿಯೇಷನ್ ಎಂಬ ಸಂಸ್ಥೆ ಸಹ ಆರಂಭಿಸಲಾಗಿದೆ. ಈ ಅಸೋಸಿಯೇಷನ್ ಮೂಲಕ ವಿದೇಶದಲ್ಲಿ ವಾಸಿಸುತ್ತಿರುವ ಮಾದಾಪರ್ ಜನರು ಒಗ್ಗೂಡುವಲ್ಲಿ, ಸುಗಮ ಸಂಪರ್ಕ ಸಾಧಿಸುವಲ್ಲಿ ಸಾಧ್ಯವಾಗಿದೆ. ಜನರ ಸಂಪರ್ಕ ಸರಳೀಕರಿಸುವ ನಿಟ್ಟಿನಲ್ಲಿ ಈ ಹಳ್ಳಿಯಲ್ಲಿಯೂ ಅಸೋಸಿಯೇಷನ್ನ ಕಚೇರಿ ಒಂದನ್ನು ಆರಂಭಿಸಲಾಗಿದೆ.
ಈ ಹಳ್ಳಿಯ ಜನರಲ್ಲಿ ಅನೇಕರು ವಿದೇಶದಲ್ಲಿ ನೆಲೆಸಿದ್ದರೂ, ತಮ್ಮ ಮಣ್ಣಿನ ಸಂಸ್ಕೃತಿಯ ಜೊತೆಗೆ ನಂಟಿರಿಸಿಕೊಂಡಿದ್ದಾರೆ. ಈ ಹಳ್ಳಿಯ ಮುಖ್ಯ ಉದ್ಯೋಗ ಕೃಷಿ ಆಗಿದ್ದು, ಇಲ್ಲಿನ ಬೆಳೆಗಳು ಮುಂಬೈನಲ್ಲಿ ಉತ್ತಮ ಮಾರುಕಟ್ಟೆ ಧಾರಣೆಯನ್ನು ಹೊಂದಿದೆ. ಒಟ್ಟಿನಲ್ಲಿ ಮಾದಾಪರ್ ಗ್ರಾಮ ದೇಶದ ಇತರ ಹಳ್ಳಿಗಳಿಗೂ ಮಾದರಿಯಾಗಬಲ್ಲ ಅತ್ಯಂತ ಶ್ರೀಮಂತ ಗ್ರಾಮ ಎಂಬುದರಲ್ಲಿ ಎರಡು ಮಾತಿಲ್ಲ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.