ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಆಗಸ್ಟ್ 12 ರಂದು ಜಿಯೋ ಸಿಂಕ್ರನೈಸ್ಡ್ ಮಾದರಿಯ ಉಪಗ್ರಹ ಉಡಾವಣೆ ಮಾಡಲಿದೆ.
ಈ ಉಪಗ್ರಹ ಭಾರತಕ್ಕೆ ಅಪ್ಪಳಿಸುವ ಪ್ರವಾಹ, ಚಂಡಮಾರುತ ಸೇರಿದಂತೆ ಇನ್ನಿತರ ಪ್ರಾಕೃತಿಕ ವಿಕೋಪಗಳ ಮಾಹಿತಿಯನ್ನು ಮುಂಗಡವಾಗಿ ತಿಳಿಯಲಿದೆ.
ಈ ಉಪಗ್ರಹ ಆಗಸ್ಟ್ 12 ರಂದು ಇಸ್ರೋ ನಿರ್ಮಿಸಿರುವ ಜಿಯೋ ಸಿಂಕ್ರನೈಸ್ಡ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ಬೆಳಗ್ಗೆ 5.43 ಕ್ಕೆ ಶ್ರೀಹರಿಕೋಟಾದಿಂದ ನಭಕ್ಕೆ ಜಿಗಿಯಲಿದೆ. ಈ ಉಪಗ್ರಹ 4 ಮೀಟರ್ ಪೇಲೋಡ್ ಫೇರಿಂಗ್ನಲ್ಲಿ ಹೊತ್ತೊಯ್ಯಲಿದೆ. ಇದರಲ್ಲಿ ಸುಮಾರು 6 ಬ್ಯಾಂಡ್ಗಳು, 42 ಮೀ. ವರೆಗಿನ ರೆಸೊಲ್ಯೂಷನ್ ಇನ್ಫ್ರಾ – ರೆಡ್ ಸೆನ್ಸಾರ್ಗಳು, ಮಲ್ಟಿ ಸ್ಪೆಕ್ಟರಲ್ ಇಮೇಜಿಂಗ್ ಸೆನ್ಸಾರ್ ಸೇರಿದಂತೆ ಅನೇಕ ಉಪಗ್ರಹಗಳನ್ನು ಅಳವಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.