ನವದೆಹಲಿ: ಸ್ವದೇಶಿ ಮೊದಲ ವಿಮಾನ ವಾಹಕ ಯುದ್ಧ ನೌಕೆ (ಐಎಸಿ) ವಿಕ್ರಾಂತ್ ಸಮುದ್ರದಲ್ಲಿ ತನ್ನ ಪ್ರಥಮ ಪ್ರಯೋಗಾರ್ಥ ಸಂಚಾರ ಆರಂಭ ಮಾಡಿದೆ.
ಈ ಯುದ್ಧನೌಕೆಯು ದೇಶದ ಅತೀ ದೊಡ್ಡ ಮತ್ತು ಸಂಕೀರ್ಣದಿಂದ ಕೂಡಿರುವುದಾಗಿದ್ದು, ಪ್ರಯೋಗಾರ್ಥ ಸಂಚಾರ ಆರಂಭಿಸಿದ ಈ ದಿನವನ್ನು ಭಾರತೀಯ ನೌಕಾಪಡೆಯ ಪಾಲಿನ ಐತಿಹಾಸಿಕ ದಿನವೆಂದು ಬಣ್ಣಿಸಲಾಗಿದೆ.
ಈ ಅತ್ಯಾಧುನಿಕ ವಿಮಾನವಾಹಕ ಯುದ್ಧ ನೌಕೆಯು ದೇಶೀಯವಾಗಿ ವಿನ್ಯಾಸಗೊಳಿಸಿ, ನಿರ್ಮಿಸಿ, ಸಂಯೋಜನೆ ಮಾಡಲಾಗಿದೆ. ಆ ಮೂಲಕ ಅಂತಹ ಸಮರ್ಥ ರಾಷ್ಟ್ರಗಳ ಪೈಕಿ ಭಾರತವೂ ಪಾಲು ಪಡೆದಂತಾಗಿದೆ. ಕಳೆದ 50 ವರ್ಷಗಳ ಹಿಂದೆ ಈ ಮೊದಲಿನ ಇದೇ ಹೆಸರಿನ ಯುದ್ಧ ನೌಕೆ ಭಾರತದ ಗೆಲುವಿನಲ್ಲಿಯೂ ಮಹತ್ವದ ಪಾತ್ರ ವಹಿಸಿತ್ತು. ಪ್ರಸ್ತುತ ಪ್ರಯೋಗಾರ್ಥ ಸಂಚಾರ ಆರಂಭಿಸಿರುವ ಈ ನೌಕೆ ಮುಂದಿನ ವರ್ಷದಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿದೆ.
ಈ ನೌಕೆಯನ್ನು ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತದ ಭಾಗವಾಗಿ ನಿರ್ಮಾಣ ಮಾಡಲಾಗಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.