ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಬಾಲಕಿ ನತಾಶಾ ಪೆರಿ ಅವರನ್ನು ವಿಶ್ವದ ಅತಿ ಮೇಧಾವಿ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಪೆರಿ ಅವರು ಎಸ್ಎಟಿ, ಎಸಿಟಿ ಗುಣಮಟ್ಟದ ಪರೀಕ್ಷೆಗಳಲ್ಲಿ ತಮ್ಮ ಅದ್ಭುತ ಮೇಧಾಶಕ್ತಿಯನ್ನು ಪ್ರದರ್ಶಿಸಿದ್ದು, ಈ ಹಿನ್ನೆಲೆಯಲ್ಲಿ ಇವರನ್ನು ವಿಶ್ವದ ಅತಿ ಮೇಧಾವಿ ವಿದ್ಯಾರ್ಥಿ ಎಂದು ಘೋಷಿಸಲಾಗಿದೆ.
ಹಲವು ಕಾಲೇಜುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ವಿದ್ವತ್ ಮೌಲ್ಯಮಾಪನ ಪರೀಕ್ಷೆ, ಅಮೆರಿಕನ್ ಕಾಲೇಜು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ರೀತಿಯ ಪರೀಕ್ಷೆಗಳ ಮುಖೇನ ಅಪರೂಪದ ಪ್ರಕರಣಗಳಲ್ಲಿ ಕೆಲ ಕಂಪೆನಿಗಳು, ಎನ್ಜಿಒಗಳು ಸ್ಕಾಲರ್ಶಿಪ್ ನೀಡುತ್ತವೆ. ಕಾಲೇಜು ಪ್ರವೇಶ ಬಯಸುವ ವಿದ್ಯಾರ್ಥಿಗಳು ಈ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂತಹ ಪರೀಕ್ಷೆಯಲ್ಲಿ ಪೆರಿ ಅವರ ಅದ್ಭುತ ಪ್ರದರ್ಶನಕ್ಕೆ ಈ ಗೌರವ ದೊರೆತಿದೆ.
ನತಾಶಾ ಅವರು ನ್ಯೂಜೆರ್ಸಿಯ ಥೇಲ್ಮಾ ಎಲ್ ಸ್ಯಾಂಡ್ಮೆರಿಯರ್ ಎಲಿಮೆಂಟರಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದು, ಈ ಪರೀಕ್ಷೆಗಳಿಗೆ ಹಾಜರಾಗಿದ್ದರು. ಪ್ರಸಕ್ತ ವರ್ಷದ ಸಿಟಿವೈ ಟ್ಯಾಲೆಂಟ್ ಸರ್ಚ್ನಲ್ಲಿ 84 ದೇಶಗಳಿಗೆ ಸಂಬಂಧಿಸಿದಂತೆ 19 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದು, ಗ್ರೇಡ್ 5 ನಲ್ಲಿದ್ದ ನತಾಶಾ ಸಹ ಪಾಲ್ಗೊಂಡಿದ್ದರು. ಈ ಪರೀಕ್ಷೆಯಲ್ಲಿ ಗ್ರೇಡ್ 8 ಗೂ ಮೇಲ್ಪಟ್ಟ ಬೌದ್ಧಿಕ ಕ್ಷಮತೆಯನ್ನು ಪೆರಿ ಪ್ರದರ್ಶಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.