ನವದೆಹಲಿ: 2020 – 21 ನೇ ಸಾಲಿನಲ್ಲಿ ಭಾರತೀಯ ರೈಲ್ವೆಯು 6,015 ಕಿಮೀ ರೈಲು ಮಾರ್ಗಗಳನ್ನು 6 ಸಾವಿರ RKM ಗುರಿಯೊಂದಿಗೆ ವಿದ್ಯುದೀಕರಣಗೊಳಿಸಿದೆ.
ಈ ಉದ್ದೇಶವನ್ನು ತ್ವರಿತವಾಗಿ ಸಾಧಿಸುವ ನಿಟ್ಟಿನಲ್ಲಿ ಮತ್ತು ವಲಯವಾರು ಹಂಚಿಕೆಗೆ ಬದಲಾಗಿ ಯೋಜನಾವಾರು ಹಂಚಿಕೆಗನ್ವಯವಾಗಿ ಸುಮಾರು 6326 ಕೋಟಿ ರೂ. ಗಳ ಬಜೆಟ್ ಅನುದಾನ ಒದಗಿಸಲಾಗಿದೆ. ಹಾಗೆಯೇ ಲಾರ್ಜ್ ಸೈಜ್ ಎಂಜಿನಿಯರಿಂಗ್ ಪ್ರೊಕ್ಯೂರ್ಮೆಂಟ್ ಮತ್ತು ಕನ್ಸ್ಟ್ರಕ್ಷನ್ ಕಾಂಟ್ರಾಕ್ಟ್ಸ್, ಬೆಟರ್ ಪ್ರೊಜೆಕ್ಟ್ ಮಾನಿಟರಿಂಗ್ ಮೆಕ್ಯಾನಿಸಂ, ಬಜೆಟ್ ಮೂಲಕ ಖಾತರಿ ಮಾಡಿದ ಮೊತ್ತ, ಕ್ಷೇತ್ರಗಳ ಅಧಿಕಾರ ವಿಕೇಂದ್ರೀಕರಣದಂತಹ ಯೋಜನೆಗನ್ನು ಸರಿಯಾದ ಸಮಯಕ್ಕೆ ಮುಗಿಸಲು ಅನುಕೂಲವಾಗುವಂತೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.
ಕೊಂಕಣ ರೈಲ್ವೆಯ 740 ಕಿಮೀ ಸೇರಿದಂತೆ ಒಟ್ಟು 64,689 ಆರ್ಕೆಎಂನ ಬ್ರಾಡ್ ಗೇಜ್ ನೆಟ್ವರ್ಕ್ ಅನ್ನು ಭಾರತೀಯ ರೈಲ್ವೆ ಹೊಂದಿದೆ. ಇವುಗಳಲ್ಲಿ 71% ಮಾರ್ಗಗಳನ್ನು ಈಗಾಗಲೇ ವಿದ್ಯುದೀಕರಣಗೊಳಿಸಲಾಗಿದೆ. ಉಳಿದ ಉದ್ದೇಶಿತ ಮಾರ್ಗಗಳಲ್ಲಿ ವಿದ್ಯುದೀಕರಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವೈಷ್ಣವ್ ಹೇಳಿದ್ದಾರೆ. ಇದನ್ನು 2023 – 24 ರೊಳಗಾಗಿ ಪೂರ್ಣಗೊಳಿಸುವುದಾಗಿಯೂ ಅವರು ತಿಳಿಸಿದ್ದಾರೆ. ಬ್ರಾಡ್ ಗೇಜ್ ಮಾರ್ಗಗಳ ವಿದ್ಯುದೀಕರಣಕ್ಕಾಗಿ ಸುಮಾರು 21 ಸಾವಿರ ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.