ಬೆಂಗಳೂರು: ದೇಶದ ಒಟ್ಟು ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗಳ ಪೈಕಿ 21.9% ಗಳಷ್ಟು ಕರ್ನಾಟಕದಲ್ಲೇ ಇವೆ.
ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎಫ್ಎಎಂಇ ನೀತಿಯ ಎರಡನೇ ಹಂತದಲ್ಲಿ 2021 ರ ಜುಲೈ 20 ರ ವರೆಗಿನ ಅವಧಿಯಲ್ಲಿ 87,659 ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಹಣಕಾಸು ನೆರವು ನೀಡಲಾಗಿದೆ. ಇದರ ಪೈಕಿ 19,270 ವಾಹನಗಳು ಕರ್ನಾಟಕದಲ್ಲಿಯೇ ಮಾರಾಟವಾಗಿದೆ. ಆ ಮೂಲದ ದೇಶದ ಎಲೆಕ್ಟ್ರಿಕ್ ವಾಹನಗಳ ಮುಖ್ಯ ತಾಣವಾಗಿ ಹೊರಹೊಮ್ಮಿದೆ. ಈ ಸಾಲಿನಲ್ಲಿ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ಅಲ್ಲಿ 13,515 ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿವೆ.
ಮೂರು ವರ್ಷಗಳ ಅವಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಎಫ್ಎಎಂಇ ಯೋಜನೆಗೆ 10 ಸಾವಿರ ಕೋಟಿ ನೆರವು ನೀಡಿದೆ. 2019 ರ ಎಪ್ರಿಲ್ ತಿಂಗಳಲ್ಲಿ ಈ ಯೋಜನೆ ಜಾರಿಯಾಗಿದೆ. 7 ಸಾವಿರ ಇ-ಬಸ್, 5 ಲಕ್ಷ ತ್ರಿಚಕ್ರ ವಾಹನ, 55000 ಇ ನಾಲ್ಕು ಚಕ್ರ ವಾಹನ, 10 ಲಕ್ಷ ಇ-ದ್ವಿಚಕ್ರ ವಾಹನ ಬೇಡಿಕೆಯ ಗುರಿ ಸೃಷ್ಟಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.