ನವದೆಹಲಿ: ಪವನಶಕ್ತಿ ಉತ್ಪಾದನೆಗೆ ಬಳಕೆ ಮಾಡುವ ಉಪಕರಣಗಳಲ್ಲಿ 70% ಗಿಂತ ಹೆಚ್ಚು ಉಪಕರಣಗಳನ್ನು ದೇಶದಲ್ಲೇ ತಯಾರಿಸಲಾಗುವುದು ಎಂದು ಕೇಂದ್ರ ಸಚಿವ ಆರ್. ಕೆ. ಸಿಂಗ್ ತಿಳಿಸಿದ್ದಾರೆ.
ಈ ಸಂಬಂಧ ಮಾದರಿಗಳು, ತಯಾರಕಗಳ ಅನುಮೋದಿತ ಪಟ್ಟಿಗಳ ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸಿದೆ. ಈ ಪವನಶಕ್ತಿ ಸಂಪನ್ಮೂಲ ನಿರ್ಧಿಷ್ಟವಾಗಿದ್ದು, ಇದನ್ನು ದೇಶದ ಏಳು ರಾಜ್ಯಗಳಲ್ಲಿ ಮಾತ್ರ ಕಾಣಬಹುದು. ಆಂಧ್ರಪ್ರದೇಶ, ಗುಜರಾತ್, ತಮಿಳುನಾಡು, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನಗಳಲ್ಲಿ ಇದನ್ನು ಕಾಣಬಹುದು ಎಂದು ಅವರು ತಿಳಿಸಿದ್ದಾರೆ.
ಹಾಗೆಯೇ ಈ ಯೋಜನೆಯ ಆರ್ಥಿಕ ಕಾರ್ಯಸಾಧ್ಯತೆಗಳನ್ನು ಆಧರಿಸಿ ಕೆಲವು ಖಾಸಗಿ ವಲಯಗಳು ಈ ಪವನ ವಿದ್ಯುತ್ ಯೋಜನೆಯನ್ನು ಸ್ಥಾಪಿಸಿದ್ದಾರೆ. ಜೊತೆಗೆ ಈ ಯೋಜನೆಯನ್ನು ಆರಂಭಿಸಲು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಟೆಂಡರ್ ಆಹ್ವಾನಿಸಲಾಗಿದೆ. ಸುಮಾರು 20 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ವಿಂಡ್ ಎನರ್ಜಿ ಸ್ಥಾಪಿಸುವ ಯೋಜನೆಯನ್ನು ಈ ಟೆಂಡರ್ ಒಳಗೊಂಡಿದೆ. ಜೂನ್ 30, 2021 ರ ಒಳಗೆ ಈಗಾಗಲೇ ದೇಶದಲ್ಲಿ 39,486 ಮೆಗಾವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸಲಾಗಿರುವುದಾಗಿ ಸಚಿವರು ತಿಳಿಸಿದ್ದಾರೆ.
ದೇಶದಲ್ಲಿ ವಿಂಡ್ ಎನರ್ಜಿ ಸ್ಥಾಪನೆ, ಉತ್ಪಾದನೆಗೆ ಕೇಂದ್ರ ಸರ್ಕಾರ ವಿಶೇಷ ಪ್ರಾಶಸ್ತ್ಯ ನೀಡುತ್ತಿದೆ. ವಿದೇಶಿ ನೇರ ಹೂಡಿಕೆಗೂ ಅವಕಾಶ ನೀಡಿದೆ. ಹಾಗೆಯೇ ಅಂತರಾಜ್ಯ ಮಾರಾಟಕ್ಕೆ ಶುಲ್ಕ ಮನ್ನಾ ಮೊದಲಾದ ಕ್ರಮಗಳನ್ನು ಸಹ ಕೇಂದ್ರ ಸರ್ಕಾರ ಕೈಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.