ನವದೆಹಲಿ: 2021 ರ ಜನವರಿ 1 ರಿಂದ ಜುಲೈ 22 ರ ನಡುವೆ ಭಾರತದಿಂದ ವಿದೇಶಗಳಿಗೆ ಒಟ್ಟು 6.4 ಕೋಟಿ ಕೊರೋನಾ ಲಸಿಕೆಗಳನ್ನು ಕಳುಹಿಸಿ ಕೊಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಸಂಬಂಧ ಲೋಕಸಭೆಗೆ ನಾಗರಿಕ ವಿಮಾನಯಾನ ಸಚಿವ ವಿ. ಕೆ. ಸಿಂಗ್ ಅವರು ಲಿಖಿತ ಉತ್ತರ ನೀಡಿದ್ದಾರೆ.
2021 ರ ಜನವರಿ 12 ರಿಂದ ಜುಲೈ 22 ರ ವರೆಗಿನ ಅವಧಿಯಲ್ಲಿ ಒಟ್ಟಾಗಿ 42.2 ಕೋಟಿ ಡೋಸ್ ಲಸಿಕೆಗಳನ್ನು ವಿಮಾನಗಳ ಮುಖೇನ ವಿದೇಶಗಳಿಗೆ ಒದಗಿಸಲಾಗಿದೆ. ಈ ಪೈಕಿ 35.8 ಕೋಟಿ ಡೋಸ್ ಲಸಿಕೆಗಳನ್ನು ದೇಶೀಯ ವಿಮಾನಗಳ ಮೂಲಕ ರವಾನಿಸಲಾಗಿದೆ. ಈ ಅವಧಿಯಲ್ಲಿ ದೇಶಾದ್ಯಂತ ನೀಡಲಾಗಿರುವ ಲಸಿಕೆಯ ಪ್ರಮಾಣ 45 ಕೋಟಿಗೂ ಹೆಚ್ಚು. 18 – 44 ವರ್ಷದೊಳಗಿನ ಜನರಿಗೆ ಸುಮಾರು 15.38 ಕೋಟಿ ಲಸಿಕೆಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.