ನವದೆಹಲಿ: ಪ್ರಸ್ತುತ 6,780 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿರುವ ದೇಶದ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 2031 ರ ವೇಳೆಗೆ 22 ರಿಯಾಕ್ಟರ್ಗಳ ಜೊತೆಗೆ 22,480 ಮೆಗಾವ್ಯಾಟ್ ತಲುಪುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರ ತಿಳಿಸಿರುವಂತೆ, 700 ಮೆಗಾವ್ಯಾಟ್ನ ಒಂದು ಪರಮಾಣು ವಿದ್ಯುತ್ ಸ್ಥಾವರವನ್ನು (ಗುಜರಾತ್ನ ಕಾಕ್ರಪರ್ ಪರಮಾಣು ವಿದ್ಯುತ್ ಯೋಜನೆಯಲ್ಲಿ ಯೂನಿಟ್ 3) ಈ ವರ್ಷದ ಜನವರಿಯಲ್ಲಿ ಗ್ರಿಡ್ಗೆ ಸಂಪರ್ಕಿಸಲಾಗಿದೆ. ಇದಾದ ಬಳಿಕ ದೇಶದ ಒಟ್ಟು ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 7480 ಮೆಗಾವ್ಯಾಟ್ ವರೆಗೆ ಹೋಗುತ್ತದೆ.
ಈ ಸಂಬಂಧ ಎಸ್. ಕೆ. ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ. ನ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಶರ್ಮಾ ಮಾತನಾಡಿದ್ದು, ಕೆಎಪಿಪಿ 3 ಘಟಕವು 2021 ರ ಸೆಪ್ಟೆಂಬರ್ ತಿಂಗಳಲ್ಲಿ ವಾಣಿಜ್ಯ ಉತ್ಪಾದನೆ ಆರಂಭಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ 10 ರಿಯಾಕ್ಟರ್ಗಳಿದ್ದು, ಒಟ್ಟು ಹಂತಗಳಲ್ಲಿ 8000 ಮೆಗಾವ್ಯಾಟ್ ನಿರ್ಮಾಣ ಹಂತದಲ್ಲಿದೆ. ಪ್ಲೀಟ್ ಮೋಡ್ನಲ್ಲಿ ಸ್ಥಾಪಿಸಲು 10 ಸ್ಥಳೀಯ 700 ಮೆಗಾವ್ಯಾಟ್ ಒತ್ತಡದ ಹೆವಿ ವಾಟರ್ ರಿಯಾಕ್ಟರ್ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಎಲ್ಲಾ ನಿರ್ಮಾಣ ಯೋಜನೆಗಳನ್ನು ಕಾರ್ಯಗತಗೊಳಿಸಿದ ಬಳಿಕ 2031 ರ ವೇಳೆಗೆ ದೇಶದ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 22,480 ಮೆಗಾವ್ಯಾಟ್ಗೆ ತಲುಪಲಿದೆ ಎಂದು ಸರ್ಕಾರ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.