ರಷ್ಯಾ: ಕೊರೋನಾ ಲಸಿಕೆಗಳಾದ ಆಸ್ಟ್ರೆಜೆನೆಕಾ ಮತ್ತು ಸ್ಪುಟ್ನಿಕ್ ಲಸಿಕೆಗಳನ್ನು ಸಂಯೋಜಿಸಿ ಬಳಸುವ ಫಿಸಿಕಲ್ ಟ್ರಯಲ್ ಪ್ರಯೋಗಗಳ ಪ್ರಮಾಣವನ್ನು ಹೆಚ್ಚಿಸಲು ರಷ್ಯಾದ ಆರೋಗ್ಯ ಸಚಿವಾಲಯ ಮುಂದಾಗಿದೆ.
ರಷ್ಯಾದ ಸ್ಟೇಟ್ ಡ್ರಗ್ ರಿಜಿಸ್ಟರ್ ಈ ಸಂಬಂಧ ಐದು ಚಿಕಿತ್ಸಾಲಯಗಳಿಗೆ ಪ್ರಯೋಗಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿದೆ. ಈ ಮೊದಲು ಅನುಮೋದನೆ ಪ್ರಕ್ರಿಯೆ ನಡೆಸಲು ಕ್ಲಿನಿಕಲ್ ಪ್ರಯೋಗಗಳನ್ನು ಆರೋಗ್ಯ ಸಚಿವಾಲಯದ ನೈತಿಕ ಸಮಿತಿ ಮೇ ತಿಂಗಳಲ್ಲಿ ಅಮಾನತುಗೊಳಿಸಿತ್ತು. ಈ ಸಂಬಂಧ ಹೆಚ್ಚು ಮಾಹಿತಿ ನೀಡುವಂತೆ ಸೂಚಿಸಿತ್ತು. ಯುಎಇ, ಅಜೆರ್ಬೈಜಾನ್, ಬೆಲಾರಸ್ ಈಗಾಗಲೇ ಆಸ್ಟ್ರೆಜೆನೆಕಾ ಮತ್ತು ಸ್ಪುಟ್ನಿಕ್ ವಿ ಲಸಿಕೆಗಳ ಮಾನವ ಪ್ರಯೋಗಗಳನ್ನು ನಡೆಸುತ್ತಿವೆ. ಈ ಎರಡೂ ಲಸಿಕೆಗಳನ್ನು ಎರಡು ಡೋಸ್ಗಳಲ್ಲಿ ನೀಡಲಾಗುತ್ತದೆ.
ಹಾಗೆಯೇ ಈಗಾಗಲೇ ಕೊರೋನಾ ಲಸಿಕೆ ತಯಾರಿಕೆಗೆ ಸಂಬಂಧಿಸಿದಂತೆ ಲಸಿಕೆ ತಯಾರಿಕೆಗಾಗಿ ಯುಎಸ್, ಯುಕೆ, ಚೀನಾ, ಬಹ್ರೇನ್, ಇಂಡೋನೇಷ್ಯಾ, ಇಟಲಿ, ಯುಎಇ ಸೇರಿದಂತೆ ಇನ್ನೂ ಹಲವಾರು ರಾಷ್ಟ್ರಗಳು ಪ್ರಯೋಗಗಳನ್ನು ನಡೆಸುತ್ತಿವೆ.
ಎರಡು ವಿಭಿನ್ನ ಲಸಿಕೆಗಳನ್ನು ಜನರಿಗೆ ನೀಡುವುದರಿಂದ ಅವರಲ್ಲಿ ರೋಗನಿರೋಧಕ ಶಕ್ತಿ ಮತ್ತಷ್ಟು ಹೆಚ್ಚುತ್ತದೆ. ಇದು ದೀರ್ಘಕಾಲಿಕ ಮತ್ತು ಪರಿಣಾಮಕಾರಿ ಫಲಿತಾಂಶ ನೀಡಬಹುದು ಎಂಬುದಾಗಿಯೂ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.