ನವದೆಹಲಿ: ಆಗಸ್ಟ್ 1 ರಿಂದ ರಾಷ್ಟ್ರಪತಿ ಭವನ ಮತ್ತು ಅಲ್ಲಿನ ಮ್ಯೂಸಿಯಂ ಸಂಕೀರ್ಣಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಭವನದ ಮೂಲಗಳು ಹೇಳಿವೆ.
ಕೊರೋನಾ ಸೋಂಕು ವ್ಯಾಪಕವಾಗುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಎಪ್ರಿಲ್ 14 ರಿಂದ ರಾಷ್ಟ್ರಪತಿ ಭವನ ಮತ್ತು ಅಲ್ಲಿನ ಮ್ಯೂಸಿಯಂಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ಈ ನಿರ್ಬಂಧವನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಶನಿವಾರ, ಭಾನುವಾರ ಹೊರತುಪಡಿಸಿದಂತೆ (ಗೆಜೆಟೆಡ್ ರಜಾದಿನಗಳನ್ನು ಹೊರತು ಪಡಿಸಿ) ಮೂರು ಪೂರ್ವ ನಿಗದಿತ ಸ್ಲಾಟ್ಗಳಲ್ಲಿ ಪ್ರವೇಶಕ್ಕೆ ಅವಕಾಶ ಇರಲಿದೆ. ಹಾಗೆಯೇ ರಾಷ್ಟ್ರಪತಿ ಭವನದ ಮ್ಯೂಸಿಯಂಗೆ ಮಂಗಳವಾರದಿಂದ ಭಾನುವಾರದ ವರೆಗೆ ವಾರದಲ್ಲಿ ಆರು ದಿನಗಳ ಕಾಲ (ಗೆಜೆಟೆಡ್ ರಜೆಗಳನ್ನು ಹೊರತಾಗಿ) ತೆರೆದಿರುತ್ತದೆ.
ಸಂದರ್ಶಿಸುವವರು https://presidentofindia.nic.in , https://rashtrapatisachivalaya.gov.in/, https://rbmuseum.gov.in/ ವೆಬ್ಸೈಟ್ಗಳ ಮೂಲಕ ತಮ್ಮ ಸ್ಲಾಟ್ಗಳನ್ನು ಕಾಯ್ದಿರಿಸಬಹುದು ಎಂದು ಮೂಲಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.