ನವದೆಹಲಿ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಾದ ಲೋಕಮಾನ್ಯ ಬಾಲಗಂಗಾಧರ ತಿಲಕ್ ಮತ್ತು ಚಂದ್ರಶೇಖರ್ ಆಜಾದ್ ಅವರ ಜನ್ಮದಿನದ ಪ್ರಯುಕ್ತ ಪ್ರಧಾನಿ ಮೋದಿ ಅವರು ಶುಭಾಶಯಗಳನ್ನು ಕೋರಿದ್ದಾರೆ.
ಟ್ವೀಟ್ ಮಾಡಿರುವ ಅವರು, ಲೋಕಮಾನ್ಯ ತಿಲಕರ ಜನ್ಮದಿನದಂದು ನಾನು ಅವರಿಗೆ ನಮಿಸುತ್ತೇನೆ. ಪ್ರಸಕ್ತ ಸನ್ನಿವೇಶದಲ್ಲಿ ಅವರ ಆಲೋಚನೆಗಳು ಮತ್ತು ತತ್ವಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದ್ದು, ಅದಕ್ಕೆ ಪೂರಕವಾಗಿ 130 ಕೋಟಿ ಭಾರತೀಯರು ಆರ್ಥಿಕವಾಗಿ ಸಮೃದ್ಧ ಮತ್ತು ಸಾಮಾಜಿಕವಾಗಿ ಪ್ರಗತಿಪರವಾದ ಆತ್ಮನಿರ್ಭರ ಭಾರತ ನಿರ್ಮಿಸಲು ನಿರ್ಧರಿಸಿದ್ದಾರೆ. ತಿಲಕರು ಭಾರತೀಯ ಮೌಲ್ಯಗಳನ್ನು, ನೀತಿಗಳನ್ನು ದೃಢವಾಗಿ ನಂಬಿದ್ದವರು. ಶಿಕ್ಷಣ, ಮಹಿಳಾ ಸಬಲೀಕರಣ ದ ಬಗೆಗಿನ ಅವರ ನಿಲುವುಗಳು ಜನರನ್ನು ಇಂದಿಗೂ ಪ್ರೇರೇಪಿಸುತ್ತಲೇ ಇವೆ. ಅವರು ಹಲವಾರು ಉನ್ನತ ಮಟ್ಟದ ಸಂಸ್ಥೆಗಳನ್ನು ಪೋಷಿಸಿದ್ದು, ಅವುಗಳು ಇಂದಿಗೂ ಪ್ರವರ್ತಕರಂತೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
I bow to the great Lokmanya Tilak on his Jayanti. His thoughts and principles are more relevant than ever before in the present circumstances, when 130 crore Indians have decided to build an Aatmanirbhar Bharat that is economically prosperous and socially progressive.
— Narendra Modi (@narendramodi) July 23, 2021
Lokmanya Tilak was a firm believer in Indian values and ethos. His views on subjects such as education and women empowerment continue to motivate several people. He was an institution builder, nurturing many top-quality institutions which have done pioneering work over the years.
— Narendra Modi (@narendramodi) July 23, 2021
ಹಾಗೆಯೇ ಭಾರತ ಮಾತೆಯ ಧೀರ ಪುತ್ರ ಚಂದ್ರಶೇಖರ್ ಆಜಾದ್ ಅವರ ಜನ್ಮದಿನದಂದು ಅವರನ್ನು ನೆನಪಿಸಿಕೊಳ್ಳುತ್ತೇನೆ. ತನ್ನ ಯೌವ್ವನದ ಕಾಲದಲ್ಲಿ ಭಾರತವನ್ನು ಸಾಮ್ರಾಜ್ಯಶಾಹಿ ಹಿಡಿತದಿಂದ ಬಂಧಮುಕ್ತಗೊಳಿಸುವಲ್ಲಿ ಶ್ರಮಿಸಿದ್ದರು. ಅವರು ಭಾರತದ ಭವಿಷ್ಯದ ಬಗ್ಗೆ ಚಿಂತನೆ ನಡೆಸಿದವರು, ಸದೃಢ ಭಾರತದ ಕನಸು ಕಂಡವರು ಎಂದು ಹೇಳಿದ್ದಾರೆ.
Remembering the valiant son of Bharat Mata, the remarkable Chandra Shekhar Azad on his Jayanti. During the prime of his youth he immersed himself in freeing India from the clutches of imperialism. He was also a futuristic thinker, and dreamt of a strong and just India.
— Narendra Modi (@narendramodi) July 23, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.