ನವದೆಹಲಿ: ಮುಂದಿನ ಆಗಸ್ಟ್ 1 ರಿಂದ ಜಾರಿಗೆ ಸಂಬಂಧಿಸಿದಂತೆ ಎಟಿಎಂ ನಿಂದ ಹಣ ವಿತ್ಡ್ರಾಗೆ ಸಂಬಂಧಿಸಿದಂತೆ ಆರ್ಬಿಐ ನೂತನ ನಿಯಮಗಳನ್ನು ಜಾರಿಗೆ ತರಲಿದೆ.
ಪ್ರತಿ ತಿಂಗಳು ಗ್ರಾಹಕರು ಎಟಿಎಂ ಮೂಲಕ ಉಚಿತವಾಗಿ ಹಣ ವಿತ್ಡ್ರಾ ಮಾಡಬಹುದು. ಹಣಕಾಸು, ಹಣಕಾಸೇತರ ವಹಿವಾಟುಗಳಿಗೆ ಸಂಬಂಧಿಸಿದಂತೆ ಈ ನಿಯಮ ಅನ್ವಯವಾಗಲಿದೆ. ಬೇರೆ ಬ್ಯಾಂಕ್ಗಳ ಎಟಿಎಂನಿಂದ ಹಣ ಪಡೆಯುವುದಾದರೆ, ಮಹಾ ನಗರಗಳಲ್ಲಿ ಮೂರು ಬಾರಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಐದು ಬಾರಿ ಉಚಿತ ಹಣ ವಿತ್ಡ್ರಾಗೆ ಅವಕಾಶ ನೀಡಲಾಗುತ್ತದೆ ಎಂದು ಆರ್ಬಿಐ ಹೇಳಿದೆ.
ಆ ಬಳಿಕ ಗ್ರಾಹಕರು ಎಟಿಎಂ ಮೂಲಕ ವಿತ್ಡ್ರಾ ಮಾಡುವ ಹಣಕ್ಕೆ 20 ರೂ. ಹೆಚ್ಚುವರಿಯಾಗಿ ಕಡಿತವಾಗಲಿದೆ. ಡ್ರಾ ಮಾಡುವ ಮೊತ್ತ ಎಷ್ಟೇ ಮೌಲ್ಯದ್ದಾದರೂ ಹೆಚ್ಚುವರಿ 20 ರೂ. ಕಡಿತವಾಗಲಿದೆ ಎಂದು ಆರ್ಬಿಐ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.