ಕೋನೂರ್: ಮಗ ಮೋದಿ ಸರ್ಕಾರದಲ್ಲಿ ಮಹತ್ವದ ಖಾತೆ ವಹಿಸಿಕೊಂಡ ಕೇಂದ್ರ ಸಚಿವ. ಅವರ ಹೆತ್ತವರು ಮಾತ್ರ ಮಗ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ‘ಕಾಯಕವೇ ಕೈಲಾಸ’ ಎಂಬಂತೆ ಸ್ವಾಭಿಮಾನದಿಂದ ದುಡಿದು ಬದುಕುತ್ತಿದ್ದಾರೆ.
ಹೌದು ಈ ಹಿಂದೆ ತಮಿಳು ನಾಡಿನ ಬಿಜೆಪಿ ಅಧ್ಯಕ್ಷರಾಗಿದ್ದ, ಸದ್ಯ ಮೋದಿ ಸಂಪುಟದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಹಾಯಕ ಸಚಿವ ಎಲ್. ಮುರುಗನ್ ಅವರ ಹೆತ್ತವರು, ಮಗ ದೇಶದ ಜವಾಬ್ದಾರಿಯುತ, ಉನ್ನತ ಹುದ್ದೆಯಲ್ಲಿದ್ದರೂ, ತಾವು ದುಡಿದು ತಿನ್ನಬೇಕು ಎಂಬ ಸ್ವಾಭಿಮಾನದಿಂದ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ.
ಮುರುಗನ್ ಅವರ ತಂದೆ ಲೋಕನಾಥನ್ (68), ತಾಯಿ ಎಲ್. ವರುದಮ್ಮಾಳ್ (59) ದಂಪತಿಯೇ ತಮ್ಮ ಸ್ವಾಭಿಮಾನಿ ಜೀವನದ ಮೂಲಕ ಸುದ್ದಿಯಾಗಿರುವುದು. ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ನಿವಾಸಿಗಳಾಗಿರುವ ಇವರು ಈಗಲೂ ಹೊಲಗದ್ದೆಗಳಲ್ಲಿ ದುಡಿದು, ಕೂಲಿ ನಾಲಿ ಮಾಡಿ ಜೀವನ ನಿರ್ವಹಿಸುತ್ತಿದ್ದಾರೆ.
ಇನ್ನು ಮಗ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಈ ದಂಪತಿ, ಈ ಹಿಂದೆ ನಮ್ಮ ಪುತ್ರ ರಾಜ್ಯಾಧ್ಯಕ್ಷರಾಗಿದ್ದರು. ಈಗ ಕೇಂದ್ರ ಸಚಿವರಾಗಿದ್ದಾರೆ. ಈಗಿರುವ ಹುದ್ದೆ ರಾಜ್ಯಾಧ್ಯಕ್ಷ ಹುದ್ದೆಗಿಂತಲೂ ದೊಡ್ಡದೇ ಎಂದು ಮುಗ್ಧವಾಗಿ ಪ್ರಶ್ನಿಸುತ್ತಾರೆ. ನಮ್ಮ ಪುತ್ರ ಇಷ್ಟು ಎತ್ತರಕ್ಕೇರಿರುವುದರಲ್ಲಿ ನಮ್ಮದೇನೂ ಪಾತ್ರವಿಲ್ಲ. ಅವನ ಸ್ವಯಂ ಶ್ರಮದಿಂದಲೇ ಅವನು ಈ ಸ್ಥಾನಕ್ಕೇರಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನು ಈ ದಂಪತಿಗಳ ಸ್ವಾಭಿಮಾನಿ, ಸಾಧಾರಣ ಬದುಕಿನ ಕಥನಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ತಮ್ಮ ಟ್ವೀಟರ್ ಖಾತೆಯಲ್ಲಿ ಈ ದಂಪತಿಗೆ ಮೆಚ್ಚುಗೆ ಸೂಚಿಸಿದ್ದಾರೆ.
Read this report to believe it . Son @Murugan_MoS is a MOS in PM Sri @narendramodi cabinet. Parents are proud but continue their work for living . pic.twitter.com/Wx0d5wsL5M
— B L Santhosh (@blsanthosh) July 18, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.