ನವದೆಹಲಿ: ಭಾರತೀಯ ನೌಕಾಪಡೆಗೆ ಎರಡು ಎಂಆರ್ಎಚ್ – 60 ಆರ್ ಮಲ್ಟಿ ರೋಲ್ ಹೆಲಿಕಾಪ್ಟರ್ಗಳನ್ನು ಅಮೆರಿಕ ನೌಕಾಪಡೆಯು ಹಸ್ತಾಂತರ ಮಾಡಿದೆ.
ಸ್ಯಾನ್ ಡಿಯಾಗೋದ ನಾರ್ತ್ ಐಲ್ಯಾಂಡ್ ನೌಕಾ ವಾಯು ನಿಲ್ದಾಣದಲ್ಲಿ ಈ ಹೆಲಿಕಾಪ್ಟರ್ಗಳನ್ನು ಅಮೆರಿಕ ನೌಕಾಪಡೆ ಭಾರತಕ್ಕೆ ಹಸ್ತಾಂತರ ಮಾಡಿದೆ. ಈ ಹೆಲಿಕಾಪ್ಟರ್ಗಳಿಂದ ಭಾರತಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಈ ಕಾರ್ಯಕ್ರಮದಲ್ಲಿ ಭಾರತದ ಪರ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಭಾಗವಹಿಸಿದ್ದರು.
ಈ ಹೆಲಿಕಾಪ್ಟರ್ ಎಲ್ಲಾ ಹವಾಮಾನಗಳಲ್ಲಿಯೂ ಬಳಕೆ ಮಾಡಲು ಪೂರಕವಾಗಿದೆ. ಇದನ್ನು ಹಲವು ವಿಶಿಷ್ಟ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಸಿದ್ಧಪಡಿಸಲಾಗಿದೆ. ಇದು ಭಾರತೀಯ ನೌಕಾಪಡೆಯ ಮೂರು ಆಯಾಮದ ಸಾಮರ್ಥ್ಯ ಹೊಂದಿದೆ. ಭಾರತೀಯ ನೌಕಾಪಡೆಯ ಸಿಬ್ಬಂದಿಗಳ ಮೊದಲ ಬ್ಯಾಚ್ ಹೆಲಿಕಾಪ್ಟರ್ ಚಾಲನೆಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ತರಬೇತಿ ಪಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.