ನವದೆಹಲಿ: ಯುಎಸ್ ಮೂಲದ ಏರೋಸ್ಪೇಸ್ ಕಂಪೆನಿ ಬೋಯಿಂಗ್ನಿಂದ ಭಾರತೀಯ ನೌಕಾಪಡೆಯು 10 ನೇ ಆ್ಯಂಟಿ ಸಬ್ಮೆರಿನ್ ವಾರ್ಫೇರ್ ಏರ್ಕ್ರಾಫ್ಟ್ ಪಿ-8ಐ ಅನ್ನು ಸ್ವೀಕರಿಸಿದೆ. ಈ ಸಂಬಂಧ ನೌಕಾಪಡೆಯು ಹೇಳಿಕೆ ಬಿಡುಗಡೆ ಮಾಡಿದೆ.
2009 ರಲ್ಲಿ ರಕ್ಷಣಾ ಸಚಿವಾಲಯವು ಎಂಟು ಪಿ-8ಐ ಏರ್ಕ್ರಾಫ್ಟ್ಗಳ ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಆ ಬಳಿಕ 2016 ರಲ್ಲಿ ನಾಲ್ಕು ಹೆಚ್ಚುವರಿ ಪಿ-8ಐ ಏರ್ಕ್ರಾಫ್ಟ್ಗಳಿಗೆ ಒಪ್ಪಂದ ಮಾಡಿಕೊಂಡಿತ್ತು.
2016 ರಲ್ಲಿ ಭಾರತದ ರಕ್ಷಣಾ ಸಚಿವಾಲಯ 4 ಹೆಚ್ಚುವರಿ ವಿಮಾನಗಳ ಖರೀದಿಗಾಗಿ ಮಾಡಿಕೊಂಡ ಒಪ್ಪಂದದ ಅಡಿಯಲ್ಲಿ ಸ್ವೀಕರಿಸಲಾಗುತ್ತಿರುವ ಎರಡನೇ ವಿಮಾನ ಇದಾಗಿದೆ. ಈ ವಿಮಾನವನ್ನು ಸಾಟಿಯಿಲ್ಲದ ಕಡಲ ವಿಚಕ್ಷಣ ಮತ್ತು ಜಲಾಂತರ್ಗಾಮಿ ವಿರೋಧಿ ಯುದ್ಧ ಸಾಮರ್ಥ್ಯಗಳ ಜೊತೆಗೆ, ವಿಪತ್ತು ಪರಿಹಾರ ಮತ್ತು ಮಾನವೀಯ ಕಾರ್ಯಾಚರಣೆಗಳ ಸಮಯದಲ್ಲಿ ಸಹಾಯ ಮಾಡಲು ನಿಯೋಜನೆ ಮಾಡಲಾಗಿದೆ.
Lt Gen Ajai Singh, C-in-C Andaman & Nicobar Command #CINCAN, reviewed operational preparedness of Naval Air Station, INS UTKROSH on Indian Navy P-8I Aircraft.
CINCAN commended all ranks for high level of operational readiness, enthusiasm & devotion to duty
Jai Hind🇮🇳 pic.twitter.com/sXcueb6phv
— HQ IDS (@HQ_IDS_India) July 10, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.