ನವದೆಹಲಿ: ಸೇನೆ ಮತ್ತು ಐಎಎಫ್ಗೆ ಅನುಮೋದಿಸಲಾದ 15 ಲಿಮಿಟೆಡ್ ಸೀರೀಸ್ ಪ್ರೊಡಕ್ಷನ್ ಹೆಲಿಕಾಪ್ಟರ್ಗಳ ಉತ್ಪಾದನಾ ಭಾಗವಾಗಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಮೂರು ಲೈಟ್ Combat ಹೆಲಿಕಾಪ್ಟರ್ಗಳನ್ನು ಭಾರತೀಯ ವಾಯುಪಡೆಗೆ ಸೇರಿಸಲು ಸಿದ್ಧತೆ ನಡೆಸಿದೆ.
ಆಕ್ಸೆಪ್ಟೆನ್ಸ್ ಪರೀಕ್ಷೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದ್ದು, ಮೊದಲ ಹಂತದಲ್ಲಿ ಮೂರು ಲೈಟ್ ಕಂಬಾಟ್ ಹೆಲಿಕಾಪ್ಟರ್ಗಳನ್ನು ಭಾರತೀಯ ವಾಯು ಪಡೆಗೆ ನೀಡಲು ಸಜ್ಜಾಗಿದೆ.
ಹಾಗೆಯೇ ಪ್ರಸಕ್ತ ವರ್ಷದಲ್ಲಿ ಸೇನೆಗೆ 4 ಎಲ್ಸಿಎಚ್ ಮತ್ತು ವಾಯುಪಡೆಗೆ 2 ಎಲ್ಸಿಎಚ್ ವಿಮಾನಗಳನ್ನು ಉತ್ಪಾದಿಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ. ಉಳಿದ 6 ಎಲ್ಸಿಎಚ್ಗಳನ್ನು ಮುಂದಿನ ವರ್ಷ ತಯಾರಿಸುವುದಾಗಿ ಸಂಸ್ಥೆ ತಿಳಿಸಿದೆ.
ಎಚ್ಎಎಲ್ ಭಾರತೀಯ ಸಶಸ್ತ್ರ ಪಡೆಗಳ ಅಗತ್ಯತೆಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ವಿಶೇಷ ಹಗುರವಾದ ದಾಳಿ ಮಾಡಲು ಬಳಕೆ ಮಾಡುವ ವಿಮಾನಗಳನ್ನು ಅಭಿವೃದ್ಧಿ ಮಾಡಿ, ವಿನ್ಯಾಸಗೊಳಿಸಿದೆ. ಇವುಗಳು 12,000 ಸಾವಿರ ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಇದು ಸೈನ್ಯಕ್ಕೆ ನಿಕಟ ವಾಯು ಬೆಂಬಲವನ್ನು ನೀಡಲಿದೆ.
ಪ್ರಸ್ತುತ ಸೈನ್ಯವು 90 ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ಗಳನ್ನು, 75 ಶಸ್ತ್ರಾಸ್ತ್ರಗಳನ್ನು ಹೊಂದಿದ ರುದ್ರ ಹೆಲಿಕಾಪ್ಟರ್ಗಳನ್ನು ಹೊಂದಿವೆ. ಈ ಹೆಲಿಕಾಪ್ಟರ್ಗಳನ್ನು ಎಚ್ಎಎಲ್ ಸ್ಥಳೀಯವಾಗಿ ಅಭಿವೃದ್ಧಿ ಮಾಡಿದೆ. ಹಾಗೆಯೇ 160 ಓಲ್ಡ್ ಚೀತಾ, ಚೇತಕ್ ಯುಟಿಲಿಟಿ ಹೆಲಿಕಾಪ್ಟರ್ಗಳನ್ನು ಸಹ ಶೀಘ್ರ ಬದಲಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.