ನವದೆಹಲಿ: ಭಾರತೀಯ ನೆಲದ ಐಟಿ ಕಾನೂನುಗಳನ್ನು ಪಾಲಿಸದ ಟ್ವಿಟ್ಟರ್ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿದೆ. ಈ ನಡುವೆ ಆರ್ಎಸ್ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಸಹ ಮೈಕ್ರೋ ಬ್ಲಾಗಿಂಗ್ ದೇಶೀಯ ಅಪ್ಲಿಕೇಶನ್ ಕೂ ಅನ್ನು ಬಳಕೆ ಮಾಡಲು ಆರಂಭಿಸಿದೆ.
ಮುಂದಿನ ದಿನಗಳಲ್ಲಿ ಆರ್ಎಸ್ಎಸ್ ತನ್ನ ಎಲ್ಲಾ ನಿರ್ಧಾರಗಳನ್ನು, ವಿಶೇಷತೆಗಳನ್ನು ಸೇರಿದಂತೆ ಅಗತ್ಯ ಮಾಹಿತಿಗಳನ್ನು ಹಂಚಿಕೊಳ್ಳುವುದಕ್ಕೆ ಕೂ ಆ್ಯಪ್ ಅನ್ನು ಬಳಕೆ ಮಾಡುವುದಾಗಿ ತಿಳಿಸಿದೆ.
ಟ್ವಿಟ್ಟರ್ ಕೆಲ ದಿನಗಳ ಹಿಂದೆ ಆರ್ಎಸ್ಎಸ್ನ ಸರಸಂಘಚಾಲಕ ಡಾ. ಮೋಹನ ಭಾಗವತ್ ಅವರ ಖಾತೆ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಖಾತೆ ಸೇರಿದಂತೆ ಇನ್ನೂ ಹಲವು ಗಣ್ಯರ ಖಾತೆಗಳ ಬ್ಲೂಟಿಕ್ ಬ್ಯಾಡ್ಜ್ ತೆಗೆದು ಸದ್ದು ಮಾಡಿತ್ತು. ಈ ಘಟನೆಯ ಬಳಿಕ ಆರ್ಎಸ್ಎಸ್ ಟ್ವಿಟ್ಟರ್ ಬಿಟ್ಟು ಕೂ ಆ್ಯಪ್ ಮೂಲಕ ತನ್ನ ಮಹತ್ವದ ನಿರ್ಧಾರಗಳನ್ನು, ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.