ಬೆಳ್ತಂಗಡಿ : ಭೂಮಾಲಕನಿಂದ ದಾಳಿಗೆ ಒಳಗಾದ ಸುಂದರ ಮಲೆಕುಡಿಯರಿಗೆ ನ್ಯಾಯ ಒದಗಿಸಬೇಕು, ಆರೋಪಿಯನ್ನು ಬಂಧಿಸಬೇಕು ಎಂದು ನೆರಿಯ ಗ್ರಾಮ ಪಂಚಾಯತು ವ್ಯಾಪ್ತಿಯ ಗ್ರಾಮಸಭೆಯಲ್ಲಿ ಸ್ಥಳೀಯ ಮೂಲನಿವಾಸಿಗಳು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದರು. ಘಟನೆ ನಡೆದು ತಿಂಗಳೇ ಕಳೆದಿದ್ದರೂ ಗ್ರಾಮ ಪಂಚಾಯತು ಅಧ್ಯಕ್ಷರು ಇನ್ನೂ ಘಟನಾ ಸ್ಥಳಕ್ಕೆ ಕನಿಷ್ಠ ಭೇಟಿಯನ್ನೂ ನೀಡದಿರುವ ಬಗ್ಗೆ ಜನರು ತೀವ್ರ ಅಸಾಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ನೆರಿಯ ಗ್ರಾಮ ಪಂಚಾಯತು ವ್ಯಾಪ್ತಿಯ ಗ್ರಾಮಸಭೆ ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ಕೋಲೋಡಿಯಲ್ಲಿ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆಯೆ ಮಲೆಕುಡಿಯ ಸಮಾಜದವರು ಕಪ್ಪು ಪಟ್ಟಿ ಧರಿಸಿ ಎದ್ದುನಿಂತು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ಸುಂದರ ಮಲೆಕುಡಿಯ ಮೇಲೆ ನಡೆದಿರುವ ದಾಳಿ ಕೇವಲ ಒಂದು ಘಟನೆಯಲ್ಲ ಇಡೀ ಮೂಲನಿವಾಸಿಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಘಟನೆ ನಡೆದು ಇಷ್ಟು ದಿನವಾಗಿದ್ದರೂ ಆರೋಪಿಯ ಬಂಧನವಾಗದಿರುವ ಬಗ್ಗೆ, ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿದರು. ಗ್ರಾಮಸಭೆ ನಡೆಯಲು ಬಿಡುವುದಿಲ್ಲ ಎಂದು ನಿರ್ಧರಿಸಿದ್ದೇವು ಆದರೆ ಗ್ರಾಮದ ಅಭಿವೃದ್ಧಿಗೆ ತೊಡಕಾಗಬಾರದು ಎಂದು ಸಭೆ ನಡೆಯಲು ಬಿಡುತ್ತಿದ್ದೇವೆ ಎಂದು ಸಭೆ ಆರಂಭಿಸಲು ಅವಕಾಶ ನೀಡಿದರು.
ಸಭೆಯಲ್ಲಿ ಚರ್ಚೆಯ ನಡುವೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಶಾಸಕರು ಸೇರಿದಂತೆ ಎಲ್ಲರೂ ಸ್ಥಳಕ್ಕೆ ಭೇಟಿ ನೀಡಿ ಸ್ವಾಂತನ ಹೇಳಿದ್ದಾರೆ.ಆದರೆಗ್ರಾಮ ಪಂಚಾಯತು ಅಧ್ಯಕ್ಷರಾಗಲಿ ಉಪಾಧ್ಯಕ್ಷರಾಗಲಿ ಇನ್ನೂ ಸಂತ್ರಸ್ಥರನ್ನು ಭೇಟಿಯಾಗಿಲ್ಲ ಎಂದು ಸುಂದರ ಮಲೆಕುಡಿಯ ಅವರು ಹೇಳಿದರು. ಇದಕ್ಕೆ ಅಧ್ಯಕ್ಷರು ತಾನು ಇನ್ನು ಅಲ್ಲಿಗೆ ಬರುತ್ತೇನೆ ಎಂದು ಹೇಳಿಕೆ ನೀಡಿದಾಗ ಇದಕ್ಕೆ ಜನರಿಂದ ತೀವ್ರ ಅಸಮಾಧಾನ ವ್ಯಕ್ತವಾಯಿತು. ಇನ್ನು ನೀವು ಅಲ್ಲಿಗೆ ಬರುವ ಅಗತ್ಯವಿಲ್ಲ ಬಂದೇನು ಆಗುವಂತಹದ್ದೇನೂ ಇಲ್ಲ ಇಂತಹ ಅಮಾನವೀಯ ಘಟನೆಯಲ್ಲಿಯು ರಾಜಕೀಯ ಮಾಡಿದ್ದೀರಿ ಇದು ಸರಿಯಲ್ಲ ಒಂದಿಷ್ಟು ಮಾನವೀಯತೆಯನ್ನು ತೋರಿಸಿ ಎಲ್ಲದಕ್ಕೂ ರಾಜಕೀಯ ಮಾಡಬೇಡಿ ಎಂದು ಜನರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಕೋಲೋಡಿ ಮಲೆಕುಡಿಯರ ಕಾಲೋನಿಗೆ ರಾಜೀವಗಾಂಧಿ ವಿಧ್ಯುತೀಕರಣ ಯೋಜನೆಯಲ್ಲಿ ಎಲ್ಲಾ ಮನೆಗಳಿಗೂ ವಿದ್ಯ್ಯುತ್ ಸಂಪರ್ಕ ಒದಗಿಸದಿರುವ ಬಗ್ಗೆ ಹಾಗೂ ಗುತ್ತಿಗೆದಾರರು ಕೆಲಸವನ್ನು ಅರ್ಧದಲ್ಲಿಯೆ ಬಿಟ್ಟು ಹೋಗಿರುವ ಬಗ್ಗೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು. ಮೂರು ತಿಂಗಳಲ್ಲಿ ಎಲ್ಲ್ಲಾ ಮನೆಗಳಿಗೂ ವಿಧ್ಯುತ್ ಒದಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಮಾರ್ಗದರ್ಶಿ ಅದಿಕಾರಿಯಾಗಿ ತಾಲೂಕು ಪಂಚಾಯತು ಕಾರ್ಯನಿರ್ವಹಣಾಧಿಕಾರಿ ಮಹಂತೇಶ್ ಆಗಮಿಸಿ ಮಾಹಿತಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.