ಬೆಂಗಳೂರು: ಕೆಎಸ್ಆರ್ ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ನಿರ್ಮಿಸಲಾದ ಜಲಚರಗಳ ಸಾಮ್ರಾಜ್ಯ ‘ಸುರಂಗ ಅಕ್ವೇರಿಯಂ’ ಅನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುತ್ತಿದೆ.
ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ನಿಗಮ ಮತ್ತು ಎಚ್ಎನ್ಐ ಎಂಟರ್ಪ್ರೈಸಸ್ ಜಂಟಿಯಾಗಿ ಇದನ್ನು ಆರಂಭಿಸಿದೆ. ಕಳೆದ ಎಪ್ರಿಲ್ ತಿಂಗಳಿನಲ್ಲಿಯೇ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿತ್ತಾದರೂ, ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಇದು ವಿಳಂಬವಾಗಿದೆ.
ಈ ಸುರಂಗ ಅಕ್ವೇರಿಯಂ ವೀಕ್ಷಕರ ಆಕರ್ಷಣೆಯ ಕೇಂದ್ರ ಬಿಂದು ಆಗಲಿದೆ. ಇದು ರೈಲು ನಿಲ್ದಾಣದಲ್ಲಿ ಶಾಶ್ವತವಾಗಿ ಸ್ಥಾಪನೆಯಾಗುತ್ತಿದ್ದು, ಭಾರತದಲ್ಲಿಯೇ ಇದು ಮೊದಲ ಪ್ರಯತ್ನ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅಕ್ವೇರಿಯಂನಲ್ಲಿ ಬ್ಲ್ಯಾಕ್ ಡೈಮಂಡ್, ಸ್ಟಿಂಗ್ ರೇ, ಹೈ ಫಿನ್ ಶಾರ್ಕ್ಸ್ ಗಳನ್ನು ಒಳಗೊಂಡಂತೆ ದೇಶ ವಿದೇಶಗಳ ಜಲಚರಗಳನ್ನು ಮುಂದಿನ ದಿನಗಳಲ್ಲಿ ವೀಕ್ಷಿಸಬಹುದಾಗಿದೆ.
ಅಕ್ವೇರಿಯಂಗೆ ಪ್ರವೇಶ ಶುಲ್ಕ 25 ರೂ. ಇದ್ದು, ಬೆಳಗ್ಗೆ 9 ರಿಂದ ರಾತ್ರಿ 9 ರ ವರೆಗೆ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.