ಬೆಂಗಳೂರು: ನಮ್ಮ ಮೆಟ್ರೋ 2 ನೇ ಹಂತದಲ್ಲಿ ನಾಗವಾರ – ಗೊಟ್ಟಿಗೆರೆ ಮಾರ್ಗದ ಹಲವು ಕಡೆ ಮರಗಳ ಸ್ಥಳಾಂತರಕ್ಕೆ ಬೆಂಗಳೂರು ಮೆಟ್ರೋಗೆ ಹೈಕೋರ್ಟ್ ಅನುಮತಿ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಒಕಾ ಮತ್ತು ಸೂರಜ್ ಗೋವಿಂದರಾಜು ನೇತೃತ್ವದ ವಿಭಾಗೀಯ ಪೀಠ ಅನುಮತಿ ನೀಡಿದೆ. ಹಾಗೆಯೇ ತೆರವು ಮಾಡಲಾಗುವ ಮರಗಳಿಗೆ ಪರ್ಯಾಯವಾಗಿ ನೆಡಲಾಗುವ ಸಸಿಗಳ ವಿವರಗಳನ್ನು ನೀಡುವಂತೆಯೂ ಪೀಠ ತಿಳಿಸಿತು.
ತಜ್ಞರ ಸಮಿತಿಯ ಸಲಹೆಯಂತೆ ನಿಗಮವು ಮೆಟ್ರೋ ನಿರ್ಮಾಣಕ್ಕಾಗಿ ಈ ಮಾರ್ಗಗಳಲ್ಲಿ ಮರಗಳನ್ನು ಕಡಿಯಲು ಮತ್ತು ಸ್ಥಳಾಂತರ ಮಾಡಲು ನ್ಯಾಯಾಲಯದ ಅನುಮತಿ ಕೋರಿತ್ತು. ಅಲ್ಲದೆ, 2021 ರ ಮಾರ್ಚ್ನಿಂದ ಮೇ ತಿಂಗಳ ಅವಧಿಯಲ್ಲಿ ಈ ಕುರಿತು ಹಲವು ಅಧಿಸೂಚನೆಗಳನ್ನು ಹೊರಡಿಸಿತ್ತು. ಮರಗಳನ್ನು ಸ್ಥಳಾಂತರ ಮಾಡುವ ವೇಳೆ ತಾನು ನೇಮಿಸಿದ ಅಧಿಕಾರಿ, ಅಥವಾ ವೃಕ್ಷ ಅಧಿಕಾರಿ ಹಾಜರಿರಬೇಕು. ಮರಗಳ ನಿರ್ವಹಣೆ ಮತ್ತು ಸಂರಕ್ಷಣೆ ಕುರಿತಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಬಿಎಂಆರ್ಸಿಎಲ್ನಿಂದ ಮಾಹಿತಿ ಪಡೆದು, ನ್ಯಾಯಾಲಯಕ್ಕೆ ಸಲ್ಲಿಸುವಂತೆಯೂ ಪೀಠ ಸೂಚಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.