ನವದೆಹಲಿ: ಸಾಂಕ್ರಾಮಿಕ ರೋಗದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಆರ್ಥಿಕತೆಯನ್ನು ಉತ್ತೇಜಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಲವು ಆರ್ಥಿಕ ಪರಿಹಾರ ಕ್ರಮಗಳನ್ನು ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಾವು ಸುಮಾರು 8 ಆರ್ಥಿಕ ಪರಿಹಾರ ಕ್ರಮಗಳನ್ನು ಘೋಷಿಸುತ್ತಿದ್ದೇವೆ, ಅವುಗಳಲ್ಲಿ ನಾಲ್ಕು ಸಂಪೂರ್ಣವಾಗಿ ಹೊಸದು ಮತ್ತು ಒಂದು ಆರೋಗ್ಯ ಮೂಲಸೌಕರ್ಯಕ್ಕೆ ಮೀಸಲಾದುದು” ಎಂದಿದ್ದಾರೆ.
ಕೋವಿಡ್ ಬಾಧಿತ ವಲಯಗಳಿಗೆ ಒಟ್ಟು 1.1 ಲಕ್ಷ ಕೋಟಿ ರೂಗಳ ಸಾಲ ಖಾತರಿ ಯೋಜನೆಯನ್ನು ಅವರು ಘೋಷಣೆ ಮಾಡಿದ್ದಾರೆ.
ಆರೋಗ್ಯ ವಲಯಕ್ಕೆ 50,000 ಕೋಟಿ ರೂ ಘೋಷಿಸಿದ್ದಾರೆ. ಇದರಲ್ಲಿ ಆರೋಗ್ಯ ಸಂಬಂಧಿತ ಯೋಜನೆಗಳ ವಿಸ್ತರಣೆಗೆ 50% ಮತ್ತು ಹೊಸ ಯೋಜನೆಗಳಿಗೆ 75% ಒಳಗೊಂಡಿದೆ. ವಿಸ್ತರಣೆ ಮತ್ತು ಹೊಸ ಯೋಜನೆಗಳ ಸಂದರ್ಭದಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ 50% ಖಾತರಿ ವ್ಯಾಪ್ತಿಯನ್ನು ಒಳಗೊಂಡಿದೆ.
ಆರೋಗ್ಯ ವಲಯಕ್ಕೆ 7.95% ಪ್ರಮಾಣದಲ್ಲಿ 100 ಕೋಟಿ ರೂಪಾಯಿ ಸಾಲ ಘೋಷಿಸಲಾಗಿದೆ.
ಆಸ್ಪತ್ರೆಗಳಲ್ಲಿ ಮಕ್ಕಳ ಆರೈಕೆ / ಮಕ್ಕಳ ಹಾಸಿಗೆಗಳಿಗಾಗಿ 23,220 ಕೋಟಿ ರೂಪಾಯಿ ಒದಗಿಸಲಾಗಿದೆ.
ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಗೆ ಹೆಚ್ಚುವರಿ 1.5 ಲಕ್ಷ ಕೋಟಿ ರೂಪಾಯಿ ಘೋಷಿಸಲಾಗಿದೆ. ಈ ಮೂಲಕ ಅದರ ಮಿತಿಯನ್ನು 50% ರಿಂದ 4.5 ಲಕ್ಷ ಕೋಟಿ ರೂ.ಗೆ ವಿಸ್ತರಿಸಲಾಗಿದೆ. ಈ ಪ್ರಸ್ತುತ ಯೋಜನೆಯನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಘೋಷಿಸಲಾದ 20 ಲಕ್ಷ ಕೋಟಿ ರೂಪಾಯಿಗಳ ಆತ್ಮನಿರ್ಭರ ಭಾರತ ಪ್ಯಾಕೇಜಿನ ಭಾಗವಾಗಿ ಘೋಷಿಸಲಾಗಿದೆ.
ಹೊಸ ಸಾಲ ಖಾತರಿ ಯೋಜನೆಯಡಿ 25 ಲಕ್ಷ ಜನರಿಗೆ ಅನುಕೂಲವಾಗಲಿದೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಣ್ಣ ಸಾಲಗಾರರಿಗೆ ಗರಿಷ್ಠ 1.25 ಲಕ್ಷ ರೂಪಾಯಿ ಸಾಲ ಸೌಲಭ್ಯ ಸಿಗಲಿದೆ.
“ಹೊಸ ಸಾಲಗಳತ್ತ ಗಮನ ಹರಿಸಲಾಗಿದೆಯೇ ಹೊರತು ಹಳೆಯ ಸಾಲಗಳನ್ನು ಮರುಪಾವತಿಸುವುದರ ಮೇಲೆ ಅಲ್ಲ” ಎಂದು ಸೀತಾರಾಮನ್ ಈ ವೇಳೆ ಹೇಳಿದ್ದಾರೆ.
ಅಂತರರಾಷ್ಟ್ರೀಯ ಪ್ರಯಾಣ ಪುನರಾರಂಭವಾದ ಬಳಿಕ ಭಾರತಕ್ಕೆ ಬರುವ ಮೊದಲ 5 ಲಕ್ಷ ಪ್ರವಾಸಿಗರು ವೀಸಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಮಾರ್ಚ್ 31, 2022 ರವರೆಗೆ ಯೋಜನೆ ಅನ್ವಯವಾಗುತ್ತದೆ ಅಥವಾ ಮೊದಲ 5 ಲಕ್ಷ ವೀಸಾಗಳ ವಿತರಣೆಯ ನಂತರ ಯೋಜನೆ ಅಂತ್ಯವಾಗಲಿದೆ. ಒಬ್ಬ ಪ್ರವಾಸಿ ಒಮ್ಮೆ ಮಾತ್ರ ಇದರ ಲಾಭ ಪಡೆಯಬಹುದು.
ನವೆಂಬರ್ 2021 ರವರೆಗೆ ಬಡವರಿಗೆ ಉಚಿತ ಆಹಾರ ಧಾನ್ಯ ಪೂರೈಸಲಾಗುತ್ತದೆ, ಇದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಒಟ್ಟು ವೆಚ್ಚವನ್ನು 2.27 ಲಕ್ಷ ಕೋಟಿ ರೂ.ಗೆ ತೆಗೆದುಕೊಂಡು ಹೋಗಲಿದೆ.
85,413 ಕೋಟಿ ರೂಪಾಯಿಗಳ ಬಜೆಟ್ಗೆ ಹೆಚ್ಚುವರಿಯಾಗಿ ಹೆಚ್ಚುವರಿ ರೂ 14,775 ಕೋಟಿ ರಸಗೊಬ್ಬರ ಸಬ್ಸಿಡಿಯನ್ನು ಒದಗಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.