ಬೆಳ್ತಂಗಡಿ: ಕನ್ನಡ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾ ಘಟಕ ಮತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಪ್ರೌಢ ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ಸಹಯೋಗದೊಂದಿಗೆ ತಾಲೂಕಿನಲ್ಲಿ ಶತಮಾನ ಕಂಡ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ಗೌರವಾರ್ಪಣೆ ಎಂಬ ಕಾರ್ಯಕ್ರಮ ಆ. 25 ರಂದು ವೇಣೂರಿನ ವಿದ್ಯೋದಯ ಅನುದಾನಿತ ಹಿ. ಪ್ರಾ ಶಾಲೆಯಲ್ಲಿ ನಡೆಯಲಿದೆ.
ತಾಲೂಕಿನ ಆಯ್ದ 12 ಶಾಲೆಗಳಲ್ಲಿ ಕಳೆದ ಬಾರಿ ಕನ್ನಡ ಸಾಹಿತ್ಯ ಸಿಂಚನ ಎಂಬ ಕನ್ನಡ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ಬಳಿಕ ಇದೀಗ ತಾಲೂಕು ಕಸಾಪ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಶಾಸಕ ವಸಂತ ಬಂಗೇರ ಗೌರವಾರ್ಪಣೆ ನಡೆಸಿಕೊಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ತಾರಕೇಸರಿ, ವಿದ್ಯೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವರಾಮ ಹೆಗ್ಡೆ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಈ ಸಮಾರಂಭದಲ್ಲಿ ಶತಮಾನ ಕಂಡ ತಾಲೂಕಿನ ಸರಕಾರಿ ಶಾಲೆಗಳಾದ ವಿದ್ಯೋದಯ ಹಿ. ಪ್ರಾ ಶಾಲೆ ವೇಣೂರು, ಗಾರ್ಡಿಯನ್ ಅನುದಾನಿತ ಹಿ. ಪ್ರಾ ಶಾಲೆ ಮಡಂತ್ಯಾರು, ಎಸ್.ಡಿ.ಎಂ ಅನುದಾನಿತ ಹಿ. ಪ್ರಾ ಶಾಲೆ ಧರ್ಮಸ್ಥಳ, ಸರಕಾರಿ ಮಾದರಿ ಹಿ. ಪ್ರಾ ಶಾಲೆ ಬೆಳ್ತಂಗಡಿ, ಪ್ರಾಥಮಿಕ ಶಾಲೆಗಳಾದ ನಾರಾವಿ, ಮಚ್ಚಿನ, ಬಂಗಾಡಿ ಮತ್ತು ಗುರುವಾಯನಕೆರೆ ಶಾಲೆಗಳು ಪುರಸ್ಕಾರವನ್ನು ಪಡೆಯಲಿದೆ ಎಂದು ತಾ| ಕಸಾಪ ಅಧ್ಯಕ್ಷ ಡಾ| ಬಿ ಯಶೋವರ್ಮ, ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಚೊಕ್ಕಾಡಿ ಮತ್ತು ಅಶ್ರಫ್ ಆಲಿಕುಂಞಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.