ನವದೆಹಲಿ: ಉಪಗ್ರಹ ಮತ್ತು ಭೂ-ಆಧಾರಿತ ಅವಲೋಕನಗಳನ್ನು ಆಧರಿಸಿದ ಕರಾವಳಿ ದತ್ತಾಂಶಗಳ ನಿಖರತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಯುಎಸ್ನ ಎನ್ಒಎಎ ಮತ್ತು ಇಸ್ರೋದ ಬಹುರಾಷ್ಟ್ರೀಯ ಯೋಜನೆಗೆ ವಿಶ್ವಸಂಸ್ಥೆಯ ಅನುಮೋದನೆ ಸಿಕ್ಕಿದೆ.
ನವೀನ ತಂತ್ರಜ್ಞಾನದ ಬಳಕೆ ಮತ್ತು ವಿಜ್ಞಾನಿಗಳಲ್ಲಿ ವಿಶ್ವಾಸ ಮತ್ತು ಸಹಯೋಗವನ್ನು ಉತ್ತೇಜಿಸುವ ಈ ಯೋಜನೆಗೆ ಅನುಮೋದನೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಈ ಯೋಜನೆಯನ್ನು “ಕಮಿಟಿ ಆನ್ ಅರ್ಥ್ ಅಬ್ಸರ್ವೇಶನ್ ಸ್ಯಾಟಲೈಟ್ಸ್- ಕೋಸ್ಟಲ್ ಅಬ್ಸರ್ವೇಶನ್, ಅಪ್ಲಿಕೇಶನ್ಸ್, ಸರ್ವಿಸಸ್ ಆಂಡ್ ಟೂಲ್ಸ್ (ಸಿಇಒಎಸ್ ಕೋಸ್ಟ್) ಎಂದು ಕರೆಯಲಾಗುತ್ತದೆ.
ಯುಎನ್ ಗೊತ್ತುಪಡಿಸಿದ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಪೂರೈಸಲು ಭೂಮಿಯ ವೀಕ್ಷಣಾ ತಂತ್ರಜ್ಞಾನಗಳನ್ನು ಬಳಸುವ ಸಾಮರ್ಥ್ಯವನ್ನು ಈ ಪ್ರಾಯೋಗಿಕ ಯೋಜನೆಯು ಹೊಂದಿದೆ ಎಂದು ಎನ್ಒಎಎ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.
ವಿಪತ್ತುಗಳಿಂದ ಸಂಭವಿಸುವ ಅಪಾಯಗಳನ್ನು ತಗ್ಗಿಸುವುದು, ತೀರ ಪ್ರದೇಶಗಳು ಮತ್ತು ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ಸಂಭವಿಸುವ ಅಪಾಯಗಳನ್ನು ತಪ್ಪಿಸುವ ಉದ್ದೇಶವನ್ನು ಯೋಜನೆ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.