ಬೆಳ್ಮಣ್: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತ್ನ ಸಂಕಲಕರಿಯದಲ್ಲಿ ಇಬ್ರಾಹಿಂ ಎಂಬವರು ಅಕ್ರಮವಾಗಿ ಕೂಡಿ ಹಾಕಿದ್ದ ಕೋಣಗಳ ಅಡ್ಡೆಗೆ ದಾಳಿ ನಡೆಸಿದ ಕಾರ್ಕಳ-ಕಿನ್ನಿಗೋಳಿಯ ಕೆಲವು ಹಿಂದೂ ಸಂಘಟನೆಗಳ ಕಾರ್ಯಕರ್ತರು 31 ಕೋಣಗಳನ್ನು ವಶಪಡಿಸಿ ಕಾರ್ಕಳ ಗ್ರಾಮಾಂತರ ಪೊಲೀಸರ ಮೂಲಕ ನೀಲಾವರ ಗೋ ಶಾಲೆಗೆ ತಲುಪಿಸಿದ್ದಾರೆ.
ಹಲವಾರು ವರ್ಷಗಳಿಂದ ಕೋಣಗಳ ವ್ಯಾಪಾರ ನಡೆಸುತ್ತಿದ್ದ ಇಬ್ರಾಹಿಂ, ಪ್ರಸ್ತುತ ವಿವಿಧ ಊರುಗಳಿಂದ ಕೋಣಗಳನ್ನು ಕೂಡಿ ಹಾಕಿ ಕೇರಳದ ಕಸಾಯಿಖಾನೆಗಳಿಗೆ ರವಾನಿಸುತ್ತಿದ್ದನೆಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕೆಲವು ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಂಕಲಕರಿಯದ ಅಡ್ಡೆಗೆ ದಾಳಿ ನಡೆಸಿ ಕಾರ್ಕಳ ಗ್ರಾಮಾಂತರ ಪೊಲೀಸರಿಗೆ ನೀಡಿದರು. ಘಟನಾ ಸ್ಥಳಕ್ಕಾಗಮಿಸಿದ ಕಾರ್ಕಳ ಪೊಲೀಸ್ ಠಾಣಾಧಿಕಾರಿ ಮಹದೇವ ಶೆಟ್ಟಿ ಕೋಣಗಳನ್ನು ವಶಪಡಿಸಿಕೊಂಡರಲ್ಲದೆ ನ್ಯಾಯಾಲಯದ ಮೂಲಕ ನೀಲಾವರ ಗೋಶಾಲೆಗೆ ಕಳುಹಿಸುವುದಾಗಿ ತಿಳಿಸಿದರು. ಅಕ್ರಮ ಕೋಣಗಳ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಇಬ್ರಾಹಿಂ ಹಾಗೂ ಇಲಿಯಾಸ್ರ ವಿರುದ್ಧ ಕೇಸು ದಾಖಲಿಸುವುದಾಗಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.