ನವದೆಹಲಿ: ಭಾರತದೊಂದಿಗೆ ಇಡೀ ವಿಶ್ವ ಅಂತರರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಈ ವರ್ಷದ ಥೀಮ್ ‘ಯೋಗ ಫಾರ್ ವೆಲ್ನೆಸ್’. ದೇಹ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಯೋಗವನ್ನು ಅಭ್ಯಾಸ ಮಾಡುವುದರ ಮೇಲೆ ಗಮನ ಕೇಂದ್ರೀಕರಿಸುವ ಸಲುವಾಗಿ ಈ ಥೀಮ್ ಅನ್ನು ಇಡಲಾಗಿದೆ..
ಏಳನೇ ಅಂತರರಾಷ್ಟ್ರೀಯ ಯೋಗ ದಿನವನ್ನು ನ್ಯೂಯಾರ್ಕ್ನ ಐಕಾನಿಕ್ ಟೈಮ್ಸ್ ಸ್ಕ್ವೇರ್ನಲ್ಲಿ ಭಾನುವಾರ ಆಚರಿಸಲಾಗಿದೆ. “Solstice in Times Square 2021” ಎಂಬ ವಿಷಯದೊಂದಿಗೆ ದಿನವಿಡೀ ನಡೆದ ಯೋಗ ಉತ್ಸವದಲ್ಲಿ 3,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು, ಅಲ್ಲಿ ಉತ್ಸಾಹಿ ಯೋಗಿಗಳು ತಮ್ಮ ಯೋಗ ಮ್ಯಾಟ್ ಮತ್ತು ಯೋಗ ಧಿರಿಸುಗಳೊಂದಿಗೆ ಟೈಮ್ಸ್ ಸ್ಕ್ವೇರ್ ಅನ್ನು ಆವರಿಸಿದ್ದರು.
ನ್ಯೂಜೆರ್ಸಿಯಲ್ಲಿ ಕೂಡ ಭಾನುವಾರ ಅಂತಾರಾಷ್ಟ್ರೀಯ ಯೋಗ ದಿನವನ್ನು ಲಿಬರ್ಟಿ ಸ್ಟೇಟ್ ಪಾರ್ಕ್ನಲ್ಲಿ ಸ್ಟ್ಯಾಚು ಆಫ್ ಲಿಬರ್ಟಿಯ ಸಮೀಪ ಆಚರಿಸಲಾಯಿತು.
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಪೋಲೆಂಡ್, ಡೆನ್ಮಾರ್ಕ್, ಅಜೆರ್ಬೈಜಾನ್, ಸುಡಾನ್ ಮತ್ತು ಮೊಜಾಂಬಿಕ್ ಸೇರಿದಂತೆ ಇತರ ದೇಶಗಳಲ್ಲಿ ಕೂಡ ಯೋಗ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.