ನವದೆಹಲಿ: ನೀವು ಭಾರತೀಯ ಕಾನೂನಿಗಿಂತ ದೊಡ್ಡವರಲ್ಲ, ಹೊಸ ಐಟಿ ಕಾನೂನುಗಳನ್ನು ನೀವು ಪಾಲಿಸಲೇ ಬೇಕು ಎಂದು ಸಂಸದೀಯ ಸಮಿತಿ ಟ್ವಿಟರ್ಗೆ ಸ್ಪಷ್ಟವಾಗಿ ಹೇಳಿದೆ.
ಭಾರತೀಯ ಕಾನೂನುಗಳನ್ನು ಪಾಲಿಸಬೇಕು ಮತ್ತು ಕೇಂದ್ರವು ರೂಪಿಸಿರುವ ಹೊಸ ಐಟಿ ನಿಯಮಗಳನ್ನು ಪಾಲಿಸಬೇಕು ಎಂದು ಸಂಸದೀಯ ಸಮಿತಿ ಟ್ವಿಟರ್ಗೆ ತಿಳಿಸಿದೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಮಾಹಿತಿ ತಂತ್ರಜ್ಞಾನದ ಸ್ಥಾಯಿ ಸಮಿತಿ ಟ್ವಿಟರ್ ಇಂಡಿಯಾದ ಪ್ರತಿನಿಧಿಗಳನ್ನು ಮತ್ತು ಐಟಿ ಸಚಿವಾಲಯದ ಅಧಿಕಾರಿಗಳನ್ನು ಸಭೆಗೆ ಕರೆದಿತ್ತು. ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯು ಶುಕ್ರವಾರ ಸಂಜೆ ಸುಮಾರು ಒಂದೂವರೆ ಗಂಟೆಗಳ ಕಾಲ ಇಬ್ಬರು ಟ್ವಿಟರ್ ಇಂಡಿಯಾ ಪ್ರತಿನಿಧಿಗಳನ್ನು ವಿಚಾರಣೆಗೆ ಒಳಪಡಿಸಿದೆ. ತರೂರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಯು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಜನರ ಹಕ್ಕುಗಳನ್ನು ಕಾಪಾಡುವ ಬಗ್ಗೆ ಟ್ವಿಟರ್ಗೆ ಕರೆ ನೀಡಿದೆ.
ಹೊಸ ಐಟಿ ನಿಯಮಗಳ ಬಗ್ಗೆ ಟ್ವಿಟರ್ ಮತ್ತು ಕೇಂದ್ರವು ಭಿನ್ನಾಭಿಪ್ರಾಯ ಹೊಂದಿರುವ ಸಮಯದಲ್ಲಿ ಈ ಸಭೆ ನಡೆದಿದೆ. ಹೆಚ್ಚಿನ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ನಿಯಮಗಳನ್ನು ಪಾಲಿಸಿದ್ದರೂ, ಟ್ವಿಟರ್ ಇನ್ನೂ ಪಾಲನೆ ಮಾಡಿಲ್ಲ.
ಕೇಂದ್ರ ಸರ್ಕಾರವು ರೂಪಿಸಿರುವ ಹೊಸ ಐಟಿ ನಿಯಮಗಳನ್ನು ಪಾಲಿಸುವಂತೆ ಟ್ವಿಟರ್ಗೆ ಸಮಿತಿ ಸರ್ವಾನುಮತದಿಂದ ಹೇಳಿದೆ ಎಂದು ಸಭೆಯ ಮೂಲಗಳು ತಿಳಿಸಿವೆ. ಭಾರತದ ಕಾನೂನುಗಳನ್ನು ಪಾಲಿಸಬೇಕು ಎಂದು ಪಕ್ಷಾತೀತವಾಗಿ ಸಂಸದರು ಸಾಮಾಜಿಕ ಮಾಧ್ಯಮ ದೈತ್ಯನಿಗೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.