ನ್ಯೂಯಾರ್ಕ್: ಮೈಕ್ರೋಸಾಫ್ಟ್ ಸಂಸ್ಥೆಯು ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಡೆಲ್ಲಾ ಅವರನ್ನು ಹೊಸ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಜಾನ್ ಥಾಂಪ್ಸನ್ ಅವರ ಜಾಗದಲ್ಲಿ ನಡೆಲ್ಲಾ ಅವರ ನೇಮಕವಾಗಿದೆ.
ನಡೆಲ್ಲಾ ಅವರು ಸರ್ವಾನುಮತದಿಂದ ಮೈಕ್ರೋಸಾಫ್ಟ್ ನಿರ್ದೇಶಕರ ಮಂಡಳಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಅಲ್ಲಿ ಅವರು ಸರಿಯಾದ ಕಾರ್ಯತಾಂತ್ರಿಕ ಅವಕಾಶಗಳನ್ನು ಹೆಚ್ಚಿಸಲು ಮತ್ತು ಪ್ರಮುಖ ಅಪಾಯಗಳನ್ನು ಗುರುತಿಸಲು ವ್ಯವಹಾರದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೆಚ್ಚಿಸುವ ಕಾರ್ಯಸೂಚಿಗೆ ಮಾರ್ಗದರ್ಶನ ನೀಡುತ್ತಾರೆ ಎಂದು ಕಂಪನಿಯು ತಿಳಿಸಿದೆ.
ಸ್ಟೀವ್ ಬಾಲ್ಮರ್ ಅವರಿಂದ 2014 ರಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಡೆಲ್ಲಾ ಅವರು, ಲಿಂಕ್ಡ್ಇನ್, ನುವಾನ್ಸ್ ಕಮ್ಯುನಿಕೇಷನ್ಸ್ ಮತ್ತು ಝೆನಿಮ್ಯಾಕ್ಸ್ನಂತಹ ಶತಕೋಟಿ ಡಾಲರ್ ವ್ಯವಹಾರವನ್ನು ಕುದುರಿಸಿದ್ದಾರೆ. ಈ ಮೂಲಕ ಮೈಕ್ರೋಸಾಫ್ಟ್ ವ್ಯವಹಾರವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
2014 ರಲ್ಲಿ ಬಿಲ್ ಗೇಟ್ಸ್ ಅವರಿಂದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಥಾಂಪ್ಸನ್ ಅವರು ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಕಂಪನಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.