ನವದೆಹಲಿ: ಪ್ರಧಾನಿ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು, ಭೂವಿಜ್ಞಾನ ಸಚಿವಾಲಯದ ಡೀಪ್ ಓಷಿಯನ್ ಮಿಷನ್ ಯೋಜನೆಗೆ ಅನುಮೋದನೆ ನೀಡಿದೆ.
ಈ ಯೋಜನೆಯನ್ನು ಹಂತ ಹಂತವಾಗಿ ಐದು ವರ್ಷಗಳ ವರೆಗೆ ನಡೆಸಲು ಸಚಿವಾಲಯವು ರೂಪುರೇಷೆ ಸಿದ್ಧಪಡಿಸಿದ್ದು, ಇದಕ್ಕಾಗಿ ಅಂದಾಜು ವೆಚ್ಚ 4077 ಕೋಟಿ ರೂ. ತಗುಲುವುದಾಗಿ ತಿಳಿಸಿದೆ. ಮೊದಲ ಹಂತದಲ್ಲಿ 2823.4 ಕೋಟಿ ರೂ. ಗಳನ್ನು ಬಳಕೆ ಮಾಡಿ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತದೆ. ಈ ಯೋಜನೆಯಂತೆ ಆಳ ಸಮುದ್ರದ ಸಂಪನ್ಮೂಲಗಳ ಅನ್ವೇಷಣೆ, ಆಳ ಸಮುದ್ರ ತಂತ್ರಜ್ಞಾನಗಳ ಸುಸ್ಥಿರ ಬಳಕೆ ಅಭಿವೃದ್ಧಿಯ ಉದ್ದೇಶವನ್ನು ಸಚಿವಾಲಯ ಹೊಂದಿರುವುದಾಗಿ ತಿಳಿಸಿದೆ.
ಇದು ದೇಶದ ಬ್ಲ್ಯೂ ಎಕಾನಮಿಕ್ ಇನಿಷಿಯೇಟಿವ್ಗಳನ್ನು ಬೇಂಬಲಿಸುವ ಯೋಜನೆಯಾಗಿದೆ. ಈ ಯೋಜನೆ ಆರು ಹಂತಗಳನ್ನು ಒಳಗೊಂಡಿದ್ದು, ಆಳ ಸಮುದ್ರದ ಗಣಿಗಾರಿಕೆ ಮತ್ತು ಮಾನವ ಸಹಿತ ಮುಳುಗು ತಂತ್ರಜ್ಞಾನ ಅಭಿವೃದ್ಧಿ, ಸಾಗರ ಹವಾಮಾನ ಬದಲಾವಣೆಯ ಸಲಹಾ ಸೇವೆಗಳ ಅಭಿವೃದ್ಧಿ, ಆಳ ಸಮುದ್ರದಲ್ಲಿ ಜೀವ ವೈವಿಧ್ಯತೆಯ ಪರಿಶೋಧನೆ ಮತ್ತು ಸಂರಕ್ಷಣೆಗಾಗಿ ತಾಂತ್ರಿಕ ಆವಿಷ್ಕಾರಗಳು, ಆಳ ಸಾಗರದ ಸಮೀಕ್ಷೆ ಮತ್ತು ಪರಿಶೋಧನೆ, ಸಾಗರದಿಂದ ಶಕ್ತಿ ಮತ್ತು ಶುದ್ಧ ನೀರು, ಸಾಗರ ಜೀವಶಾಸ್ತ್ರಕ್ಕಾಗಿ ಸುಧಾರಿತ ಸಾಗರ ಕೇಂದ್ರ ಮೊದಲಾದ ಅಂಶಗಳನ್ನು ಒಳಗೊಂಡಿದೆ.
ಈ ಯೋಜನೆ ಮರೈನ್ ಬಯೋಲಜಿಯ ಸಾಮರ್ಥ್ಯ ವೃದ್ಧಿಯತ್ತಲೂ ಗಮನಹರಿಸಲಿದೆ. ಹಾಗೆಯೇ ಭಾರತೀಯ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಹಾಗೆಯೇ ವಿಶೇಷ ಉಪಕರಣಗಳು, ಹಡಗುಗಳ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆ, ಅಗತ್ಯ ಮೂಲಸೌಕರ್ಯಗಳನ್ನು ಸ್ಥಾಪಿಸುವುದು ಮೊದಲಾದವುಗಳನ್ನು ಉತ್ತೇಜಿಸಲಿದೆ ಎಂದು ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.