ಉಡುಪಿ : ತುಳುನಾಡಿನಲ್ಲಿ ನಾಗಾರಾಧನೆಗೆ ಮೊದಲ ಪ್ರಾಶಸ್ತ್ಯ. ಎಲ್ಲಾ ಹಬ್ಬಗಳಿಗಿಂತ ಮೊದಲು ಬರುವ ಹಬ್ಬವೇ ನಾಗರಪಂಚಮಿ. ಮೊದಲು ನಾಗರಾಧನೆಮಾಡಿ ನಂತರ ಇತರ ಹಬ್ಬಗಳು ಆರಂಭವಾಗುವುದು ಇಲ್ಲಿನ ಆಚರಣೆಯ ವೈಶಿಷ್ಟ. ಇಂದು ಉಡುಪಿ ಜಿಲ್ಲೆಯಾದ್ಯಂತ ಲಕ್ಷಾಂತರ ಭಕ್ತರು ನಾಗದೇವರಿಗೆ ಹಾಲೆರೆದು ಪುನೀತರಾದರು.
ನಾಗದೇವರ ಭೂಮಿಯಲ್ಲಿ ತುಳುನಾಡ ಜನ ವಾಸವಾಗಿದ್ದಾರೆ ಎಂಬುದು ನಂಬಿಕೆ. ಈ ಕಾರಣದಿಂದಲೇ ತುಳುನಾಡ ಜನ ನಾಗದೇವರಿಗೆ ವಿಶೇಷವಾದ ಸ್ಥಾನಮಾನವನ್ನು ಕಲ್ಪಿಸಿದ್ದಾರೆ. ನಾಗರಪಂಚಮಿಯಂದು ತಪ್ಪದೇ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.
ನಾಗರಪಂಚಮಿ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ನಾಗರ ಪಂಚಮಿ ಹಬ್ಬದ ಬಳಿಕ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ ಹಬ್ಬಗಳು ನಡೆಯುತ್ತದೆ. . ನಾಗರಪಂಚಮಿಯಂದು ನಾಗನಿಗೆ ಹಾಲೆರೆದರೆ ಆರೋಗ್ಯ, ಸಂಪತ್ತು, ಸಂತಾನ ವೃದ್ದಿಸುತ್ತದೆ ಎಂಬ ನಂಬಿಕೆ ತುಳುನಾಡಿನಲ್ಲಿದೆ. ಆದ್ದರಿಂದ ತುಳುನಾಡಿನ ಜನರು ನಾಗನಿಗೆ ಹಾಲೆರೆದು ಪೂಜಿಸುತ್ತಾರೆ.
ನಾಗರಪಂಚಮಿಯಂದು ನಾಗನಿಗೆ ಹಾಲೆರೆದರೆ ಅದು ಮಳೆಯ ಮೂಲಕ ಪಾತಾಳದಲ್ಲಿರುವ ನಾಗದೇವರಿಗೆ ತಲುಪಿ ಸುಖ-ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ನಂಬಿಕೆ. ಇನಾಗದೇವರ ಪೂಜೆ ಪ್ರಕೃತಿ ಪೂಜೆ ಅಂತಲೂ ಹೇಳಬಹುದು.
ಹಿಂದಿನ ಕಾಲದಲ್ಲಿ ಪ್ರಾಕೃತಿಕವಾಗಿಯೇ ಅಂದರೆ ಮರದ ಕೆಳಭಾಗದಲ್ಲಿಯೇ ನಾಗನ ಮೂಲಗಳು ಇದ್ದವು. ಆದರೆ ಈಗ ಕಾಂಕ್ರೀಟಿಕರಣದ ಪ್ರಭಾವದಿಂದ ನಾಗನ ಮೂಲಗಳು ಕಾಂಕ್ರಿಟೀಕರಣಗೊಂಡಿದೆ. ಎಲ್ಲೆಡೆ ಬಹುಮಹಡಿ ಕಟ್ಟಡಗಳು ತಲೆ ಎತ್ತುತ್ತಿದ್ದು ಇದರಿಂದ ನಾಗನ ಮೂಲ ನೆಲೆಗಳು ನಾಶ ವಾಗುತ್ತಿರುವುದಂತು ಸತ್ಯ. ಪ್ರಾಕೃತಿಯ ಆರಾಧನೆ ಎಂದು ಕರೆಯುವ ನಾಗದೇವರ ಪೂಜೆಗೂ ಇಂದು ಆತಂಕ ಎದುರಾಗಿದೆ.
ಉಡುಪಿಯ ಶ್ರೀ ಕೃಷ್ಣ ಮಠ, ಸಗ್ರಿಯ ವಾಸುಕೀ ಕ್ಷೇತ್ರ, ಕುಕ್ಕಿಕಟ್ಟೆಯ ಮುಚ್ಚಿಲಕೋಡು ಹಾಗೂ ನಾಗನ ಮೂಲ ಸ್ಥಾನಗಳಲ್ಲಿ ಕುಟುಂಬವರ್ಗ ಒಂದು ಗೂಡಿ ಇಂದು ನಾಗನಿಗೆ ಹಾಲು, ಅರಿಶಿನ, ಕೇದಗೆ ಹೂವು, ತುಪ್ಪ, ಹೂವು ಸಮರ್ಪಿಸಿ ನಾಗದೇವರಿಗೆ ಪೂಜೆ ಸಲ್ಲಿಸಿದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.