ನವದೆಹಲಿ : ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ ಮಂಗಳವಾರ 17 ರಾಜ್ಯಗಳಿಗೆ 2021-22ನೇ ಸಾಲಿನ ಹಂಚಿಕೆ ನಂತರದ ಆದಾಯ ಕೊರತೆ(ಪಿಡಿಆರ್.ಡಿ.)ಯ 3ನೇ ತಿಂಗಳ ಕಂತು 9,871 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಈ ಮೂರನೆ ಕಂತಿನ ಬಿಡುಗಡೆಯೊಂದಿಗೆ ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾದ ಹಂಚಿಕೆ ನಂತರದ ಆದಾಯ ಕೊರತೆಯ ಒಟ್ಟು ಮೊತ್ತ 29,613 ಕೋಟಿ ರೂ. ಆಗಿದೆ. ಮಂಗಳವಾರ 2021-22ನೇ ಸಾಲಿನಲ್ಲಿ ಬಿಡುಗಡೆ ಮಾಡಲಾದ ಹಂಚಿಕೆ ನಂತರದ ಅನುದಾನದ ರಾಜ್ಯವಾರು ವಿವರವನ್ನು ಲಗತ್ತಿಸಲಾಗಿದೆ.
ಸಂವಿಧಾನದ ವಿಧಿ 275ರ ಅಡಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಂಚಿಕೆ ನಂತರದ ಆದಾಯ ಕೊರತೆಯ ಅನುದಾನವನ್ನು ಒದಗಿಸುತ್ತದೆ. ಹಂಚಿಕೆ ನಂತರದ ಆದಾಯ ಕೊರತೆಯನ್ನು ಸರಿದೂಗಿಸಲು ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ಈ ಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. 15ನೇ ಹಣಕಾಸು ಆಯೋಗವು 1 ರಾಜ್ಯಗಳಿಗೆ ಹಂಚಿಕೆ ನಂತರದ ಕೊರತೆಯ ಅನುದಾನಕ್ಕೆ ಶಿಫಾರಸು ಮಾಡಿತ್ತು.
ಹಂಚಿಕೆ ನಂತರದ ಆದಾಯ ಕೊರತೆ ಅನುದಾನಕ್ಕೆ ಶಿಫಾರಸು ಮಾಡಲಾದ ರಾಜ್ಯಗಳೆಂದರೆ: ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಪಂಜಾಬ್, ರಾಜಾಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ.
ಈ ಅನುದಾನವನ್ನು ಪಡೆಯಲು ರಾಜ್ಯಗಳಿಗೆ ಅರ್ಹತೆ ಮತ್ತು ಅನುದಾನದ ಪ್ರಮಾಣವನ್ನು ಆಯೋಗವು ಆದಾಯದ ಮೌಲ್ಯಮಾಪನ ಮತ್ತು ರಾಜ್ಯದ ಖರ್ಚಿನ ನಡುವಿನ ಅಂತರವನ್ನು ಆಧರಿಸಿ ನಿರ್ಧರಿಸುತ್ತದೆ. 2021-22ರ ಆರ್ಥಿಕ ವರ್ಷಕ್ಕೆ ಮೌಲ್ಯಮಾಪನ ಹಂಚಿಕೆಯನ್ನು ಆಯೋಗವು ಗಣನೆಗೆ ತೆಗೆದುಕೊಂಡಿದೆ.
15ನೇ ಹಣಕಾಸು ಆಯೋಗವು 2021-22ನೇ ಸಾಲಿಗೆ 17 ರಾಜ್ಯಗಳಿಗೆ ಒಟ್ಟು 1,18,452 ಕೋಟಿ ರೂ. ಹಂಚಿಕೆ ನಂತರದ ಆದಾಯ ಕೊರತೆಯ ಅನುದಾನವನ್ನು ಶಿಫಾರಸು ಮಾಡಿದೆ. ಈ ಅನುದಾನವನ್ನು 12 ಮಾಸಿಕ ಕಂತುಗಳಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತದೆ.
ರಾಜ್ಯವಾರು ಹಂಚಿಕೆ ನಂತರದ ಆದಾಯ ಕೊರತೆ ಅನುದಾನ ಬಿಡುಗಡೆ
ಕ್ರ.ಸಂ | ರಾಜ್ಯದ ಹೆಸರು | ಜೂನ್ 2021ರಲ್ಲಿ ಬಿಡುಗಡೆ ಮಾಡಿದ ಮೊತ್ತ (3ನೇ ಕಂತು)(ರೂ. ಕೋಟಿಗಳಲ್ಲಿ) | 2021-22ರಲ್ಲಿ ಬಿಡುಗಡೆ ಮಾಡಲಾದ ಒಟ್ಟು ಮೊತ್ತ(ಏಪ್ರಿಲ್ –ಜೂನ್ 2021)(ರೂ. ಕೋಟಿಗಳಲ್ಲಿ) |
1 | ಆಂಧ್ರಪ್ರದೇಶ | 1438.08 | 4314.24 |
2 | ಅಸ್ಸಾಂ | 531.33 | 1593.99 |
3 | ಹರಿಯಾಣ | 11.00 | 33 |
4 | ಹಿಮಾಚಲ ಪ್ರದೇಶ | 854.08 | 2562.24 |
5 | ಕರ್ನಾಟಕ | 135.92 | 407.76 |
6 | ಕೇರಳ | 1657.58 | 4972.74 |
7 | ಮಣಿಪುರ | 210.33 | 630.99 |
8 | ಮೇಘಾಲಯ | 106.58 | 319.74 |
9 | ಮಿಜೋರಾಂ | 149.17 | 447.51 |
10 | ನಾಗಾಲ್ಯಾಂಡ್ | 379.75 | 1139.25 |
11 | ಪಂಜಾಬ್ | 840.08 | 2520.24 |
12 | ರಾಜಾಸ್ಥಾನ | 823.17 | 2469.51 |
13 | ಸಿಕ್ಕಿಂ | 56.50 | 169.5 |
14 | ತಮಿಳುನಾಡು | 183.67 | 551.01 |
15 | ತ್ರಿಪುರಾ | 378.83 | 1136.49 |
16 | ಉತ್ತರಾಖಂಡ್ | 647.67 | 1943.01 |
17 | ಪಶ್ಚಿಮ ಬಂಗಾಳ | 1467.25 | 4401.75 |
ಒಟ್ಟು | 9,871.00 | 29,613.00 |
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.