ನವದೆಹಲಿ: ಮೂರು ಸ್ಥಳೀಯವಾಗಿ ನಿರ್ಮಿಸಿದ ಸುಧಾರಿತ ಲಘು ಹೆಲಿಕಾಪ್ಟರ್ಗಳಾದ ಎಎಲ್ಹೆಚ್ ಎಂಕೆ -3 ಅನ್ನು ಭಾರತೀಯ ನೌಕಾಪಡೆಗೆ ನಿನ್ನೆ ಸೇರ್ಪಡೆಗೊಳಿಸಲಾಗಿದೆ. ಸಮುದ್ರ ವಿಚಕ್ಷಣ ಮತ್ತು ಕರಾವಳಿ ಭದ್ರತೆಗೆ ಇವುಗಳನ್ನು ಬಳಸಲಾಗುತ್ತದೆ.
ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಈ ಮೂರು ಹೆಲಿಕಾಪ್ಟರ್ಗಳನ್ನು ತಯಾರಿಸಿದೆ. ಇವುಗಳನ್ನು ವಿಶಾಖಪಟ್ಟಣಂನ ಭಾರತೀಯ ನೌಕಾ ನಿಲ್ದಾಣ (ಐಎನ್ಎಸ್) ಡೆಗಾ, ಈಸ್ಟರ್ನ್ ನೇವಲ್ ಕಮಾಂಡ್ (ಇಎನ್ಸಿ) ನಲ್ಲಿ ನೌಕಾಸೇನೆಗೆ ಸೇರ್ಪಡೆಗೊಳಿಸಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಹೆಲಿಕಾಪ್ಟರ್ಗಳಿಗೆ ಆಧುನಿಕ ಕಣ್ಗಾವಲು ರಾಡಾರ್ ಮತ್ತು ಎಲೆಕ್ಟ್ರೋ-ಆಪ್ಟಿಕಲ್ ಉಪಕರಣಗಳನ್ನು ಅಳವಡಿಸಲಾಗಿದ್ದು, ಇದು ಹಗಲು ಮತ್ತು ರಾತ್ರಿಯ ವೇಳೆಯಲ್ಲಿ ದೀರ್ಘ-ಶ್ರೇಣಿಯ ಶೋಧ ಕಾರ್ಯಾಚರಣೆಗೆ ಸಹಾಯ ಮಾಡುವುದರ ಜೊತೆಗೆ ಕಡಲ ವಿಚಕ್ಷಣದ ಪಾತ್ರವನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ.
ವಿಶೇಷ ಕಾರ್ಯಾಚರಣೆ ಸಾಮರ್ಥ್ಯಗಳ ಜೊತೆಗೆ, ಕಾನ್ಸ್ಟಾಬ್ಯುಲರಿ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಎಎಲ್ಹೆಚ್ ಎಂಕೆ -3 ಗಳಿಗೆ ಭಾರೀ ಮೆಷಿನ್ ಗನ್ ಅಳವಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.