ಕಾಬೂಲ್: ಅಫ್ಘಾನಿಸ್ಥಾನದಿಂದ ಯುಎಸ್ ಪಡೆಗಳು ಹಿಂದೆ ಸರಿದ ನಂತರ ಅಲ್ಲಿ ಹಿಂಸಾಚಾರ ಉಲ್ಬಣಗೊಂಡಿದೆ, ಜೂನ್ 3 ಮತ್ತು ಜೂನ್ 4ರಂದು 102 ಭದ್ರತಾ ಪಡೆ ಸದಸ್ಯರು ಸೇರಿದಂತೆ 119 ಜನರು ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೇ, ಕೇವಲ ಎರಡು ದಿನಗಳಲ್ಲಿ 196 ಭದ್ರತಾ ಪಡೆ ಸದಸ್ಯರು ಗಾಯಗೊಂಡಿದ್ದಾರೆ ಎಂದು ಟೊಲೊ ನ್ಯೂಸ್ ವರದಿ ಮಾಡಿದೆ.
ಇದೇ ಅವಧಿಯಲ್ಲಿ ತಾಲಿಬಾನ್ ಕಡೆಗೆ ಉಂಟಾದ ಸಾವು ನೋವುಗಳು ಕೂಡ ಇಷ್ಟೇ ಪ್ರಮಾಣದಲ್ಲಿ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ ಜೂನ್ 3 ರಂದು ಎಂಟು ಪ್ರಾಂತ್ಯಗಳಲ್ಲಿ ನಡೆದ ಅಫ್ಘಾನ್ ರಕ್ಷಣಾ ಕಾರ್ಯಾಚರಣೆಯಲ್ಲಿ 183 ತಾಲಿಬಾನ್ಗಳು ಕೊಲ್ಲಲ್ಪಟ್ಟಿದ್ದಾರೆ ಮತ್ತು ಜೂನ್ 4 ರಂದು ಅಫ್ಘಾನ್ ಪಡೆಗಳ ಕಾರ್ಯಾಚರಣೆಯಲ್ಲಿ 181 ರಲ್ಲಿ ತಾಲಿಬಾನ್ ಕೊಲ್ಲಲ್ಪಟ್ಟಿದ್ದಾರೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ವರದಿ ಮಾಡಿದೆ.
ತೀವ್ರಗೊಳ್ಳುತ್ತಿರುವ ಸಂಘರ್ಷವನ್ನು ಈ ಸಾವುನೋವುಗಳು ಸೂಚಿಸುತ್ತವೆ ಎಂದು ವಿಶ್ಲೇಷಕರು ಹೇಳಿದ್ದಾರೆ. ರಕ್ಷಣಾ ಸಚಿವಾಲಯವು ಪ್ರತಿದಿನ ಕನಿಷ್ಠ 10 ಪ್ರಾಂತ್ಯಗಳಲ್ಲಿ ಘರ್ಷಣೆ ನಡೆಯುತ್ತಿದೆ ಎಂದು ತಿಳಿಸಿದೆ.
ಆದರೆವೊಲೆಸಿ ಜಿರ್ಗಾದ ಆಂತರಿಕ ಭದ್ರತಾ ಆಯೋಗದ ಮುಖ್ಯಸ್ಥರು, “ಪ್ರತಿದಿನ 24 ರಿಂದ 27 ಪ್ರಾಂತ್ಯಗಳಲ್ಲಿ ಘರ್ಷಣೆಗಳು ನಡೆಯುತ್ತಿವೆ. ಭದ್ರತಾ ಪಡೆಗಳ ಸಾವುನೋವು ಹೆಚ್ಚಾಗಿದೆ, ಆದರೆ ಇದು ತಾಲಿಬಾನ್ಗಿಂತ ಹೆಚ್ಚಾಗಿದೆ” ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.