News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಮೇಕ್ ಇನ್ ಇಂಡಿಯಾ’ ಅಡಿ 6 ಜಲಾಂತರ್ಗಾಮಿ ನೌಕೆ ನಿರ್ಮಾಣಕ್ಕೆ ಅನುಮೋದನೆ

ನವದೆಹಲಿ: ಆರು ಕನ್ವೆನ್‌ಷನಲ್  ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು‌ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯ, ರೂ 43,000 ಕೋಟಿ ಮೌಲ್ಯದ ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಅನುಮೋದಿಸಿದೆ ಎಂದು ಸರ್ಕಾರ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಯೋಜನೆಯನ್ನು ‘ಕಾರ್ಯತಂತ್ರದ ಸಹಭಾಗಿತ್ವ ಮೋಡ್’ ಅಡಿಯಲ್ಲಿ ನಡೆಸಲು ಪ್ರಸ್ತಾವನೆ (ಆರ್‌ಎಫ್‌ಪಿ) ಯ ಕೋರಿಕೆಯನ್ನು ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಅಂಗೀಕರಿಸಿದೆ. ಈ ಮಾದರಿಯಡಿಯಲ್ಲಿ ಇಂತಹ ಮೊದಲ ಮಿಲಿಟರಿ ಹಾರ್ಡ್‌ವೇರ್ ಸ್ವಾಧೀನ ಯೋಜನೆ ಇದಾಗಿದೆ ಎಂದು ಸರ್ಕಾರ ಹೇಳಿದೆ.

ಈ ಯೋಜನೆಗೆ ಅನುಮೋದನೆಯು ಭಾರತವು ತನ್ನ 30 ವರ್ಷಗಳ ಜಲಾಂತರ್ಗಾಮಿ ನಿರ್ಮಾಣ ಕಾರ್ಯಕ್ರಮದಲ್ಲಿ ಗುರಿ ಸಾಧಿಸಲು ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳಿದೆ.

“ಕಾರ್ಯತಂತ್ರದ ಪಾಲುದಾರಿಕೆ ಮಾದರಿಯಲ್ಲಿ ಪ್ರಾಜೆಕ್ಟ್ ಪಿ 75 (ಐ) ಅಡಿಯಲ್ಲಿ ಆರು ಕನ್ವೆನ್‌ಷನಲ್  ಜಲಾಂತರ್ಗಾಮಿ ನೌಕೆಗಳ ನಿರ್ಮಾಣಕ್ಕಾಗಿ ಡಿಎಸಿ ಅನುಮೋದನೆ ನೀಡಿದ್ದು ಇದು ಒಂದು ಹೆಗ್ಗುರುತಿನ ಅನುಮೋದನೆಯಾಗಿದೆ, ಇದು ಕಾರ್ಯತಂತ್ರದ ಸಹಭಾಗಿತ್ವದ ಮಾದರಿಯಲ್ಲಿನ ಇಂತಹ ಮೊದಲ ಯೋಜನೆಯಾಗಿದೆ” ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಈ ಯೋಜನೆಯಡಿಯ ಮೊದಲ ಜಲಾಂತರ್ಗಾಮಿ ನೌಕೆ ಭಾರತೀಯ ನೌಕಾಪಡೆಯ ಸೇವೆಗೆ ಪ್ರವೇಶಿಸಲು ಕನಿಷ್ಠ ಏಳು ವರ್ಷಗಳಾದರೂ ಬೇಕಾಗುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top