ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪಿಎಂ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ ಫಂಡ್ (ಪಿಎಂ ಸ್ವನಿಧಿ) ಯೋಜನೆಯ ಮೂಲಕ ನಿರ್ದೇಶಿಸಲಾದ ಒಟ್ಟು ಸಾಲಗಳಲ್ಲಿ ಶೇ 95 ರಷ್ಟನ್ನು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್ಬಿ) ವಿತರಣೆ ಮಾಡಿವೆ.
ಕಳೆದ ವರ್ಷ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ರಾಷ್ಟ್ರವ್ಯಾಪಿ ಲಾಕ್ಡೌನ್ ವಿಧಿಸಿದ ನಂತರ ತೀವ್ರ ಹೊಡೆತವನ್ನು ಎದುರಿಸಿದ ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರವನ್ನು ಪುನರಾರಂಭಿಸಲು ಸಹಾಯವಾಗುವಂತೆ 10,000 ರೂ.ಗಳ ಸಾಲವನ್ನು ನೀಡಲು ಹೊರತಂದ ಯೋಜನೆಯೇ ಪಿಎಂ ಸ್ವನಿಧಿ ಯೋಜನೆ.
2020 ರಲ್ಲಿ ಜೂನ್ 1 ರಂದು ಈ ಯೋಜನೆ ಉದ್ಘಾಟನೆಗೊಂಡಿದ್ದು, 2021 ಮೇ 30 ರವರೆಗೆ ಯೋಜನೆಯ ಪ್ರಕಾರ ಸುಮಾರು 24.21 ಲಕ್ಷ ಅರ್ಜಿಗಳನ್ನು ಮಂಜೂರು ಮಾಡಲಾಗಿದೆ.
ಹಣಕಾಸು ಸೇವೆಗಳ ಇಲಾಖೆ ಟ್ವೀಟ್ ಮಾಡಿ, “ಪಿಎಂ ಸ್ವನಿಧಿ ಯೋಜನೆಯಡಿ ಸಾಲ ನೀಡುವಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಮುಂಚೂಣಿಯಲ್ಲಿವೆ! ಇವುಗಳು 31/05/2021 ರ ವೇಳೆಗೆ 23,16,207 ಸಾಲಗಳನ್ನು ಮಂಜೂರು ಮಾಡಿದ್ದು, ಇದು ಈ ಯೋಜನೆಯಡಿ ಮಂಜೂರು ಮಾಡಲಾದ ಸಾಲಗಳ ಒಟ್ಟು ಶೇಕಡಾ 95 ಕ್ಕಿಂತ ಹೆಚ್ಚಾಗಿದೆ! ” ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.