ನವದೆಹಲಿ: ಲಡಾಖ್ನಲ್ಲಿ ಮೊಬೈಲ್ ನೆಟ್ವರ್ಕ್ ಸೇವೆಗಳನ್ನು ಸುಧಾರಿಸುವ ಸಲುವಾಗಿ ಮುಂದಿನ ಎರಡು ತಿಂಗಳಲ್ಲಿ ಸುಮಾರು 100 ಮೊಬೈಲ್ ಟವರ್ಗಳನ್ನು ಅಲ್ಲಿ ಸ್ಥಾಪಿಸಲಾಗುತ್ತಿದೆ. ಗಡಿರೇಖೆಯ ಹಳ್ಳಿಗಳಲ್ಲಿ ತ್ವರಿತವಾಗಿ ಟವರ್ಗಳನ್ನು ಮತ್ತು ಒಎಫ್ಸಿ ಕೇಬಲ್ಗಳನ್ನು ಅಳವಡಿಸಲು ಸಹಾಯ ಮಾಡುವಂತೆ ಕೇಂದ್ರಾಡಳಿತ ಪ್ರದೇಶದ ಆಡಳಿತವು ಸೇನೆಯನ್ನು ಕೋರಿದೆ.
ಆನ್ಲೈನ್ ತರಗತಿಗಳು ಮತ್ತು ಲಸಿಕೆ ಪಡೆಯುವುದು ಸೇರಿದಂತೆ ಇತರ ಕಾರ್ಯಗಳಿಗೆ ಗುಣಮಟ್ಟದ ಮೊಬೈಲ್ ನೆಟ್ವರ್ಕ್, ಡೇಟಾ ಸೇವೆಗಳನ್ನು ಒದಗಿಸುವಂತೆ ವಿದ್ಯಾರ್ಥಿಗಳು ಮತ್ತು ಯುವಕರಿಂದ ನಿರಂತರ ಬೇಡಿಕೆಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರಾಡಳಿತದ ಐಟಿ ಕಾರ್ಯದರ್ಶಿ ಸೌಗತ್ ಬಿಸ್ವಾಸ್ ಅವರು ಲಡಾಕ್ನಲ್ಲಿ ಮೊಬೈಲ್ ನೆಟ್ವರ್ಕ್ ಪರಿಸ್ಥಿತಿಯನ್ನು ಪರಿಶೀಲಿಸಿದರು. ದೂರದಲ್ಲಿರುವ ಹಳ್ಳಿಗಳಲ್ಲಿ, ಮೊಬೈಲ್ ಸಿಗ್ನಲ್ಗಳನ್ನು ಪಡೆಯಲು, ಆನ್ಲೈನ್ ಅಧ್ಯಯನ ಮಾಡಲು, ವಿದ್ಯಾರ್ಥಿಗಳು ಬೆಟ್ಟಗಳಿಗೆ ಹತ್ತುವ ಉದಾಹರಣೆಗಳು ಕಂಡು ಬಂದಿವೆ.
ಪರಿಶೀಲನಾ ಸಭೆಯಲ್ಲಿ, ಐಟಿ ಕಾರ್ಯದರ್ಶಿ ಸೌಗತ್ ಬಿಸ್ವಾಸ್ ಅವರು ರಾಜ್ಯ ಆಪರೇಟರ್ ಮತ್ತು ಇತರ ಮೂರು ಪ್ರಮುಖ ಖಾಸಗಿ ಟೆಲಿಕಾಂ ಸೇವಾ ನೆಟ್ವರ್ಕ್ಗಳಿಂದ ಸುಧಾರಿತ ಸೇವೆಗಳನ್ನು ಕೋರಿದ್ದಾರೆ. ಮತ್ತೊಂದೆಡೆ, ಇಬ್ಬರು ಸೇವಾ ಪೂರೈಕೆದಾರರು ಹೆಚ್ಚುವರಿ 93 ಮೊಬೈಲ್ ಟವರ್ಗಳನ್ನು ಸ್ಥಾಪಿಸುವ ಬಗ್ಗೆ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಅದರಲ್ಲಿ 53 ಟವರ್ಗಳು ಯುನಿವರ್ಸಲ್ ಸರ್ವಿಸ್ ಆಬ್ಲಿಗೇಶನ್ ಫಂಡ್ (ಯುಎಸ್ಒಎಫ್) ಕಾರ್ಯಕ್ರಮದಡಿವೆ. ಈ ಪೈಕಿ 24 ಜುಲೈ ಅಂತ್ಯದ ವೇಳೆಗೆ ಸಕ್ರಿಯಗೊಳ್ಳುವ ನಿರೀಕ್ಷೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.