ಅದು ತುತುಕುಡಿಯ ವ್ಯಾಸರಪದಿ ಸ್ಲಮ್ನಲ್ಲಿರುವ ಅಭಿನವ ನೃತ್ಯಾಲಯಯೆಂಬ ನೃತ್ಯಾಲಯ. ಅಲ್ಲಿ ಧೀ ತಾ ಧಿ ತೈ ಎಂದು ನೃತ್ಯವನ್ನು ಕಲಿಸುವ ಸ್ವರಗಳು ಕೇಳಿಬರುತ್ತವೆ. ಇದರಲ್ಲೇನು ವಿಶೇಷ ಇದು ಸಾಮಾನ್ಯ ಎಂದು ಹೇಳಬೇಡಿ ಇಲ್ಲಿ ನೃತ್ಯವನ್ನು ಹೇಳಿಕೊಡುವವರು ತೃತೀಯ ಲಿಂಗಿಯಾಗಿರುವ ಪೊನ್ನಿಯವರು.
ಸಮಾಜದಲ್ಲಿ ದೂರವಿಡಲ್ಪಡುವವರು ಎಂದು ಹೇಳಿಕೊಂಡು ಭಾವಿಸಿ ನಮ್ಮ ಜೀವನ ಇಷ್ಟೇನೆ ಎಂದು ಭಾವಿಸುವ ತೃತೀಯಲಿಂಗಿಗಳು ಇವರನ್ನು ನೋಡಿ ಬದಲಾಗಬೇಕು. ಸಾಧನೆಗೆ ಲಿಂಗಬೇಧವಿಲ್ಲ ಎಂದು ಪೊನ್ನಿಯವರು ಸಾಬೀತು ಪಡಿಸಿದ್ದಾರೆ.
ಭರತನಾಟ್ಯದಲ್ಲಿ ಡಿ.ಪ್ಲೋಮಾ ಪಡೆದರು. ನಾಟ್ಯವು ಇವರನ್ನು ಆಕರ್ಷಿಸಿತು. ಇದೇ ಕಾರಣದಿಂದಾಗಿ ನಾಟ್ಯದಲ್ಲಿ ಎಂ.ಎ ಯನ್ನು ಪಡೆದರು. ಕೆಲವು ವರ್ಷಗಳ ಹಿಂದೆ ಸ್ಲಂನ ಮಕ್ಕಳಿಗೆ ನಾಟ್ಯವನ್ನು ಕಲಿಸಲೇಂದು ‘ಅಭಿನವ ನೃತ್ಯಾಲಯ’ವನ್ನು ಆರಂಭಿಸಿದರು.
ಅದರೆ ಈ ನಾಟ್ಯಶಾಲೆಯನ್ನು ಪ್ರಾರಭಿಸುವಾಗ ಜನರಪೂರಕ ಸ್ಪಂದನೆ ಸಿಗುತ್ತಿತೋ ಇಲ್ಲವೋ ಎಂಬ ಅಳಕು ಅವರಲ್ಲಿತ್ತು. ಆದರೆ ಮೊದಲಿಗೆ 4 ಜನ ವಿದ್ಯಾರ್ಥಿಗಳು ನ್ಯಾಟ್ಯ ಕಲಿಯಲು ಪ್ರಾರಂಭಿಸಿದರು. ಈಗ ವಿದ್ಯಾರ್ಥಿಗಳ ಸಂಖ್ಯೆ 35ಕ್ಕೂ ಹೆಚ್ಚು ಇದರಲ್ಲಿ ಮಕ್ಕಳಲ್ಲದೆ ವಿವಾಹಿತ ಮಹಿಳೆಯರು ಮತ್ತು ಪುರುಷರು ಇವರ ಬಳಿ ನೃತ್ಯಕಲಿಯುತ್ತಿದ್ದಾರೆ.
ಪೊನ್ನಿಯವರು ತಿಂಗಳಿಗೆ 10 ಕ್ಕಿಂತ ಅಧಿಕ ಪ್ರದರ್ಶನಗಳನ್ನು ನೀಡುತ್ತಿದ್ದು ನಟುವಾಂಗವನ್ನು ತನ್ನ ನತ್ಯಗುರುಗಳಾದ ಶಿವಕುಮಾರ್ ಅವರ ಬಳಿ ಶಿವಕಲ್ಯಾಣ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅಲ್ಲದೇ ಅಲ್ಲಿಯ 100 ಕ್ಕು ಅಧಿಕ ವಿದ್ಯಾರ್ಥಿಗಳಿಗೆ ನೃತ್ಯವನ್ನು ಹೇಳಿಕೊಡುತ್ತಿದ್ದಾರೆ.
ಅಲ್ಲದೇ ಅವರು ಮಕ್ಕಳಿಗಾಗಿ ಬೇಸಗೆ ಶಿಬಿರ ,ಯೋಗಾ ಶಿಬಿರ ಮತ್ತು ಸಂಗೀತ ಕಲಿಕಾ ಶಿಬಿರಗಳನ್ನು ನಡೆಸುತ್ತಿರುವುದು ವಿಶೇಷವೇ ಸರಿ. ಈ ಮೂಲಕ ಸಾಧಕರಿಗೆ ಜನರು ಎಂದೂ ತಾರತಮ್ಯ ತೋರುದಿಲ್ಲ ಎಂಬುದು ಸತ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.