ನವದೆಹಲಿ: ಡಾ.ಹರ್ಷವರ್ಧನ್ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾಗಿ ತಮ್ಮ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು.
ಹರ್ಷವರ್ಧನ್ ಅವರು ತಮ್ಮ ಅಧಿಕಾರವಧಿಯ ಕೊನೆಯ ದಿನವಾದ ನಿನ್ನೆ ವಿಶ್ವ ಆರೋಗ್ಯ ಸಂಸ್ಥೆಯ 149 ನೇ ಅಧಿವೇಶನದ ಕಾರ್ಯಕಾರಿ ಮಂಡಳಿಯ ಸಭೆಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದರು.
ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಅಚಲ ಬೆಂಬಲವನ್ನು ಸಚಿವರು ಶ್ಲಾಘಿಸಿದ್ದಾರೆ. ಕೋವಿಡ್ -19 ಔಷಧಿಗಳು ಮತ್ತು ಲಸಿಕೆಗಳಿಗೆ ಜಾಗತಿಕ ಪ್ರವೇಶವನ್ನು ಸಮನಾಗಿ ನೀಡುವಲ್ಲಿನ ಪ್ರಯತ್ನವನ್ನು ವಿಶ್ವ ಆರೋಗ್ಯ ಅಸೆಂಬ್ಲಿ ಬೆಂಬಲಿಸಿದೆ ಎಂದಿದ್ದಾರೆ.
ಸಾಂಕ್ರಾಮಿಕ ಪ್ರತಿಕ್ರಿಯೆಯ ಎಲ್ಲಾ ಕ್ಷೇತ್ರಗಳಿಗೆ ಜಾಗತಿಕ ಒಗ್ಗಟ್ಟು ಮತ್ತು ಸಹಕಾರವು ಮೂಲಭೂತವಾಗಿದೆ ಮತ್ತು ಅದನ್ನು ಬಲಪಡಿಸುವುದನ್ನು ಮುಂದುವರಿಸಬೇಕು ಎಂದು ಅವರು ಹೇಳಿದ್ದಾರೆ.
ಡಬ್ಲ್ಯುಎಚ್ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಮಾತನಾಡಿ, ಡಾ. ಹರ್ಷವರ್ಧನ್ ಅವರ ಜಾಗತಿಕ ಆರೋಗ್ಯದ ಪ್ರಮುಖ ನಾಯಕತ್ವವನ್ನು ಅಭಿನಂದಿಸಿದರು.
ಡಾ. ಟೆಡ್ರೊಸ್ ಅವರು WHOನ ವಿಶೇಷ ಮಹಾನಿರ್ದೇಶಕರ ಪ್ರಶಸ್ತಿಯನ್ನು ಸ್ವೀಕರಿಸಿದ್ದಕ್ಕಾಗಿ ಹರ್ಷವರ್ಧನ್ ಅವರನ್ನು ಅಭಿನಂದಿಸಿದರು. ತಂಬಾಕು ನಿಯಂತ್ರಣಕ್ಕೆ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಿದ ಅವರು, ತಂಬಾಕು ನಿಯಂತ್ರಣದತ್ತ ಜಾಗತಿಕ ಪ್ರಯತ್ನಗಳನ್ನು ನಡೆಸುವಲ್ಲಿ ಡಾ.ಹರ್ಷವರ್ಧನ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.