ನವದೆಹಲಿ: ದೇಶದಲ್ಲಿ ಮೇ ತಿಂಗಳಲ್ಲಿ ನೀಡಲಾಗಿರುವ ಲಸಿಕೆಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳು ಆಧಾರರಹಿತ ತಪ್ಪು ಮಾಹಿತಿ ಪ್ರಕಟಿಸಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಜೂನ್ 2021 ರಲ್ಲಿ ಕೇಂದ್ರ ಸರ್ಕಾರ 120 ಮಿಲಿಯನ್ ಡೋಸ್ ಲಸಿಕೆಗಳನ್ನು ನೀಡುವ ಭರವಸೆ ನೀಡಿತ್ತು. ಆದರೆ ಮೇ ತಿಂಗಳಲ್ಲಿ ಲಭ್ಯವಿದ್ದ 79 ಮಿಲಿಯನ್ ಡೋಸ್ ಲಸಿಕೆ ಪೈಕಿ 58 ಮಿಲಿಯನ್ ಡೋಸ್ಗಳಷ್ಟನ್ನು ಮಾತ್ರವೇ ನೀಡಲಾಗಿದೆ ಎಂಬ ವರದಿಗಳನ್ನು ಪ್ರಕಟಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದವು. ಇದು ಆಧಾರರಹಿತ ವರದಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಜೂ. 1 ರ ಬೆಳಿಗ್ಗೆ 7 ಗಂಟೆಯ ವರೆಗಿನ ಸಚಿವಾಲಯದ ಮಾಹಿತಿಯಂತೆ ಮೇ 31 ರ ವರೆಗೂ ಒಟ್ಟಾರೆ 61.06 ಮಿಲಿಯನ್ ಲಸಿಕೆ ಡೋಸ್ಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಉಳಿದ 16.22 ಮಿಲಿಯನ್ ಡೋಸ್ಗಳು ರಾಜ್ಯಗಳ ಬಳಿ ಇವೆ. ಮೇ 1 -31 ರ ವರೆಗೆ 79.45 ಮಿಲಿಯನ್ ಡೋಸ್ ಲಸಿಕೆ ಲಭ್ಯವಿತ್ತು. ಈ ಸಂಬಂಧ ಮಾಧ್ಯಮಗಳು ತಪ್ಪು ಸುದ್ದಿ ಪ್ರಕಟಿಸಿದ್ದವು. ಲಸಿಕೆ ನೀತಿಯನ್ನು ವಿಶ್ಲೇಷಿಸದೆ ಮಾಧ್ಯಮಗಳು ಟೀಕಿಸುತ್ತಿವೆ ಎಂದು ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.