ಭುವನೇಶ್ವರ: ಒಡಿಶಾ ಮೂಲದ ಮಹಿಳೆಯೊಬ್ಬರು ಸ್ಥಾಪನೆ ಮಾಡಿರುವ ಅಮೆರಿಕ ಮೂಲದ ಸಂಸ್ಥೆಯೊಂದು ಕೊರೋನಾ ವಿರುದ್ಧದ ಹೋರಾಟಕ್ಕೆ ಒಡಿಶಾ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಜಯಂತಿ ಮೊಹಂತಿ ಎಂಬವರು ಅಮೆರಿಕದಲ್ಲಿ ಸ್ಥಾಪಿಸಿರುವ ‘ಅವರ್ ಬಿಸ್ವಾಸ್’ ಸಂಸ್ಥೆಯ ಮೂಲಕ ಈ ನೆರವನ್ನು ಒಡಿಶಾ ಸರ್ಕಾರಕ್ಕೆ ನೀಡಿದ್ದಾರೆ. 2008 ರಿಂದ ತೊಡಗಿದಂತೆ ಈ ಸಂಸ್ಥೆ ಒಡಿಶಾದ ಬೇರೆ ಬೇರೆ ಭಾಗಗಳಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ.
ಈ ಸಂಬಂಧ ಮೊಹಂತಿ ಅವರು ಮಾತನಾಡಿದ್ದು, ಸಮಯೋಚಿತ ಕ್ರಮಗಳಿಂದ ಒಡಿಶಾದಲ್ಲಿ ಕೊರೋನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಎಲ್ಲರ ಸಹಕಾರದ ಜೊತೆಗೆ ಕೊರೋನಾ ಹೋರಾಟದಲ್ಲಿ ರಾಜ್ಯ ಜಯಗಳಿಸಲಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.