ಲಂಡನ್: ವಿಶ್ವದ ಅತಿ ದೊಡ್ಡ ಉಗ್ರಗಾಮಿ ಒಸಮಾ ಬಿನ್ ಲಾಡೆನ್ಗೆ ವಿಶ್ವದ ಶಾಂತಿ ದೂತ ಮಹಾತ್ಮ ಗಾಂಧೀಜಿಯವರು ಸ್ಫೂರ್ತಿಯಾಗಿದ್ದರು ಎಂಬುದನ್ನು ನಂಬಲು ಸಾಧ್ಯವೇ? ಖಂಡಿತಾ ನಂಬಲೇ ಬೇಕು.
ಗಾಂಧೀಜಿಯವರು ಭಾರತದ ಸ್ವಾತಂತ್ರ್ಯ ಹೋರಾಟದ ವೇಳೆ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದು, ಅವರ ಅಸಹಕಾರ ಚಳುವಳಿ ಲಾಡೆನ್ನನ್ನು ಬಹುವಾಗಿ ಸೆಳೆದಿತ್ತು. ಇದು 1993ರಲ್ಲಿ ಆತನ ಮಾಡಿದ ಭಾಷಣದಿಂದ ಖಚಿತವಾಗಿದೆ. ಆ ಭಾಷಣದ ಆಡಿಯೋ ಟೇಪ್ಗಳು ಈ ಲಭ್ಯವಾಗಿದೆ.
ಅಮೆರಿಕಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದ ಆತ, ಗಾಂಧೀಜಿಯವರ ಬ್ರಿಟಿಷರ ವಿರುದ್ಧದ ಹೋರಾಟದಿಂದ ಪ್ರೇರಣೆ ಪಡೆಯುವಂತೆ ಸೂಚಿಸಿದ್ದ.
‘ಮಹಾತ್ಮ ಗಾಂಧೀಜಿಯವರು ಬ್ರಿಟಿಷ್ ಉತ್ಪನ್ನಗಳನ್ನು ತೊರೆಯುವಂತೆ ನೀಡಿದ್ದ ಕರೆಯಿಂದಾಗಿ ಬ್ರಿಟಿಷರು ತಮ್ಮ ಅತಿದೊಡ್ಡ ಕಾಲೋನಿಯನ್ನು ಹಿಂದಕ್ಕೆ ಪಡೆಯಬೇಕಾಯಿತು. ಇದೀಗ ಅಮೆರಿಕಾಗೂ ನಾವು ಅದನ್ನೇ ಮಾಡಬೇಕಾಗಿದೆ’ ಎಂದು ಆತ ಭಾಷಣದಲ್ಲಿ ಹೇಳಿದ್ದ.
ಅದೇನೆಯಿರಲಿ ಸದಾ ರಕ್ತಪಾತ ನಡೆಸುತ್ತಿದ್ದ ಉಗ್ರನೊಬ್ಬನಿಗೆ ಅಹಿಂಸಾವಾದಿ ಗಾಂಧೀಜಿಯವರು ಸ್ಫೂರ್ತಿಯಾಗಿದ್ದರು ಎಂಬುದು ಆಶ್ವರ್ಯದ ವಿಷಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.