ನವದೆಹಲಿ: ಈ ವರ್ಷದ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ವಿಶೇಷ ಪ್ರಶಸ್ತಿಯನ್ನು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಿಗೆ ನೀಡಲಾಗಿದೆ.
ಪ್ರತಿ ವರ್ಷ, ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ನಿಯಂತ್ರಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳಿಗಾಗಿ ಆರು ಡಬ್ಲ್ಯುಎಚ್ಒ ಪ್ರದೇಶಗಳಲ್ಲಿನ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ಗುರುತಿಸಿ ಗೌರವಿಸುತ್ತದೆ.
ಇ-ಸಿಗರೆಟ್ ಮತ್ತು ಹೀಟೆಡ್ ತಂಬಾಕು ಉತ್ಪನ್ನಗಳನ್ನು ನಿಷೇಧಿಸುವ 2019 ರ ರಾಷ್ಟ್ರೀಯ ಕಾನೂನಿನಲ್ಲಿ ಡಾ.ಹರ್ಷವರ್ಧನ್ ನಾಯಕತ್ವ ಪ್ರಮುಖ ಪಾತ್ರ ವಹಿಸಿದೆ ಎಂದು ಡಬ್ಲ್ಯುಎಚ್ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಹರ್ಷವರ್ಧನ್, ತಂಬಾಕು ಮುಕ್ತ ಮನೆಗಳು ಮತ್ತು ತಂಬಾಕು ಮುಕ್ತ ಸಮಾಜವು ತನ್ನ ಜೀವನದ ಪ್ರಮುಖ ವೈಯಕ್ತಿಕ ಮಿಷನ್ ಆಗಿ ಉಳಿದಿದೆ ಎಂದಿದ್ದಾರೆ.
Thank you my dear friend @DrTedros for bestowing this honour upon me.#TobaccoFreeHomes & #TobaccoFree society continue to remain important personal missions in my life, both of which I have been working towards since the last three decades@WHO @MoHFW_INDIA#WorldNoTobaccoDay https://t.co/zGTbtipar2
— Dr Harsh Vardhan (@drharshvardhan) May 31, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.