ಬೆಂಗಳೂರು: ಹೋಂ ಐಸೋಲೇಷನ್ ನಲ್ಲಿ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಮೊನೋಕ್ಲೊನಲ್ Antibody ಥೆರಪಿ ಬಳಸಲು ಡಿಸಿಜಿಐ ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಆಸ್ಪತ್ರೆಗಳು ಇದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿವೆ. ಈ ಥೆರಪಿಯನ್ನು ಈವರೆಗೆ ದೆಹಲಿಯಲ್ಲಿ ಓರ್ವ ರೋಗಿಗೆ ಮಾತ್ರವೇ ನೀಡಲಾಗಿತ್ತು.
ನಗರದ ಮಣಿಪಾಲ ಆಸ್ಪತ್ರೆ ಸೌಮ್ಯ, ಮಧ್ಯಮ ಲಕ್ಷಣ ಹೊಂದಿರುವ ಸೋಂಕಿತರಿಗೆ ಈ ಥೆರಪಿ ನೀಡಲು ಮುಂದಾಗಿದೆ. ಈ ಚಿಕಿತ್ಸೆಯಲ್ಲಿ ಕ್ಯಾಸಿರಿವಿಮಾಬ್ ಮತ್ತು ಇಮ್ಡೆವಿಮಾಬ್ ಅನ್ನು ಬೆರೆಸಿ ಸೀಸೆಯ ರೂಪದಲ್ಲಿ ಲಭ್ಯವಾಗುವಂತೆ ತಯಾರಿ ಮಾಡಲಾಗುತ್ತದೆ. ರೋಗಿ ಆಸ್ಪತ್ರೆಗೆ ದಾಖಲಾಗದೆಯೇ ಈ ಥೆರಪಿಯನ್ನು ಪಡೆದುಕೊಳ್ಳಬಹುದು. ಈ ಥೆರಪಿ ಎಚ್ ಸಿಕ್ಯು, ಫೆವಿಫಿರವಿರ್, ಐವರ್ಮೆಕ್ಟಿನ್ಗಿಂತ ಅಧಿಕ ಪರಿಣಾಮಕಾರಿಯೂ ಹೌದು.
ಇದು ಸ್ಟ್ರೈಕ್ ಪ್ರೊಟೀನ್ಗೆ ವಿರುದ್ಧವಾಗಿಶವರ್ತಿಸಿ ವೈರಾಣು ಶ್ವಾಸಕೋಶ ಸೇರಿದಂತೆ ತಡೆಯುತ್ತದೆ. ರೂಪಾಂತರ ವೈರಸ್ ದೇಹ ಸೇರದಂತೆ ನೋಡಿಕೊಳ್ಳುತ್ತದೆ. ಈ ಔಷಧವನ್ನು ನಿರ್ಧಿಷ್ಟ ಸಂದರ್ಭದಲ್ಲಿ ಬಳಕೆ ಮಾಡಬಹುದಾಗಿದ್ದು, ಹೆಚ್ಚಿನ ಅಪಾಯ ಎದುರಿಸುತ್ತಿರುವ ಸೋಂಕಿತರಲ್ಲಿ ಇದು ಹೆಚ್ಚು ಪ್ರಭಾವ ಬೀರಬಹುದು ಎಂದು.ಮಣಿಪಾಲ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.