ಬೆಂಗಳೂರು: ಕೊರೋನಾ ಸೋಂಕಿತರ ಚಿಕಿತ್ಸೆಗೆ ಆಮ್ಲಜನಕ ಅವಲಂಬನೆ ಕಡಿಮೆ ಮಾಡಲು ಪೂರಕವಾಗುವಂತಹ ಲಘು ವಿಕಿರಣ ಚಿಕಿತ್ಸಾ ವಿಧಾನವನ್ನು ಪ್ರಯೋಗ ಮಾಡಲು ಎಚ್ಸಿಜಿ ಆಸ್ಪತ್ರೆ ಸಿದ್ಧತೆ ನಡೆಸಿದೆ.
ಈ ಪ್ರಯೋಗ ಯಶಸ್ವಿಯಾದಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ಆಮ್ಲಜನಕದ ಅವಲಂಬನೆ ಅರ್ಧಕ್ಕರ್ಧ ಕಡಿಮೆಯಾಗಲಿದೆ. ಪ್ರಸ್ತುತ ಸೋಂಕಿತರಿಗೆ ಸುಮಾರು 6 – 8 ದಿನಗಳ ವರೆಗೆ ಆಕ್ಸಿಜನ್ ಒದಗಿಸಲಾಗುತ್ತದೆ. ಅಃತಹ ಸೋಂಕಿತರಿಗೆ ಈ ಚಿಕಿತ್ಸೆ ನೀಡಿ ಅವರ ಶ್ವಾಸಕೋಶದ ವೈರಸ್ ನಾಶವಾಗಿ ಹಾನಿ ತಪ್ಪಲಿದೆ. ಜೊತೆಗೆ 2 – 3 ದಿನಗಳ ವರೆಗೆ ಈ ಚಿಕಿತ್ಸೆ ಪಡೆದ ಸೋಂಕಿತರಿಗೆ ಆಮ್ಲಜನಕ ಒದಗಿಸಿದರೆ ವೆಂಟಿಲೇಟರ್ ಅವಲಂಬನೆಯ ಹಂತವನ್ನು ತಡೆಯಬಹುದು ಎಂಬುದು ತಜ್ಞರ ಅಭಿಪ್ರಾಯ.
ಈಗಾಗಲೇ ಈ ಚಿಕಿತ್ಸೆಯನ್ನು ನವದೆಹಲಿ ಏಮ್ಸ್, ಪಾಟ್ನಾ, ಚೆನ್ನೈಗಳಲ್ಲಿಯೂ ನಡೆಸಲಾಗಿದ್ದು 90% ಗಳಷ್ಟು ಪರಿಣಾಮ ಬೀರಿದೆ. ಇದೀಗ ಹುಬ್ಬಳ್ಳಿ, ಬೆಂಗಳೂರು ಎಚ್ಸಿಜಿ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಪ್ರಯೋಗಕ್ಕೆ ಎಥಿಕಲ್ ಸಮ್ಮತಿ ದೊರೆತಿದೆ. ಈ ಚಿಕಿತ್ಸೆಯ ರೇಡಿಯೇಶನ್ ಥೆರಪಿಗೆ 10 -15 ನಿಮಿಷ ಸಾಕು. ಜೊತೆಗೆ ಇದು ಶ್ವಾಸಕೋಶದ ಮೇಲಿನ ಹಾನಿಯನ್ನು ಸಹ ತಪ್ಪಿಸಲಿದೆ. ಇನ್ನೆರಡು ವಾರಗಳಲ್ಲಿ ಈ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಎಚ್ಸಿಜಿ ಆಸ್ಪತ್ರೆಯ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.