ಬೆಂಗಳೂರು: ಜನಸ್ನೇಹಿ ಜಲಜೀವನ್ ಮಿಷನ್ ಬಹುಗ್ರಾಮ ಯೋಜನೆಯಡಿ ನಾಲ್ಕು ಜಿಲ್ಲೆಗಳಲ್ಲಿ 6,768.85 ಕೋಟಿ ರೂ ವೆಚ್ಚದ ಯೋಜನೆಗಳನ್ನು ನಡೆಸಲು ಸಚಿವ ಸಂಪುಟ ಸಮ್ಮತಿ ನೀಡಿದೆ.
ನಬಾರ್ಡ್ನ ಮೂಲಸೌಕರ್ಯ ಅಭಿವೃದ್ಧಿ ನೆರವು ಯೋಜನೆಯಡಿಯಲ್ಲಿ ರಾಯಚೂರು ಜಿಲ್ಲೆಗೆ 1,988.01 ಕೋಟಿ, ವಿಜಯಪುರ ಜಿಲ್ಲೆ ಯೋಜನೆ -1 ರ ಅಡಿಯಲ್ಲಿ 1,431.48 ಕೋಟಿ, ವಿಜಯಪುರ ಜಿಲ್ಲೆ ಯೋಜನೆ -2 ರಡಿಯಲ್ಲಿ 954.51 ಕೋಟಿ, ಮಂಡ್ಯ ಜಿಲ್ಲೆಯ ಮೂರು ತಾಲೂಕುಗಳಿಗೆ ಸಂಬಂಧಿಸಿದಂತೆ 690.36 ಕೋಟಿ, ಧಾರವಾಡ ಜಿಲ್ಲೆಯ ಯೋಜನೆಗೆ 1,032.44 ಕೋಟಿ ರೂ. ಗಳನ್ನು ವಿನಿಯೋಗ ಮಾಡಲು ಸರ್ಕಾರ ಸಮ್ಮತಿಸಿದೆ.
ಹಾಗೆಯೇ ನಬಾರ್ಡ್ನ ಆರ್ಐಡಿಎಫ್ ಯೋಜನೆಯನ್ವಯ ಹೊಳಲ್ಕೆರೆ ಯೋಜನೆಗೆ 276 ಕೋಟಿ , ಬೈಂದೂರು ಯೋಜನೆಗೆ 396 ಕೋಟಿ ಬಳಸಲು ಸಂಪುಟ ಅಸ್ತು ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.