ನವದೆಹಲಿ: ಅಧಾನ್ ಮತ್ತು ಇಕಾಮಾತ್ ಪ್ರಾರ್ಥನೆಗಳಿಗೆ ಮಾತ್ರ ಧ್ವನಿವರ್ಧಕಗಳನ್ನು ಬಳಸುವಂತೆ ಸೌದಿ ಅರೇಬಿಯಾ ಸರ್ಕಾರವು ತನ್ನ ದೇಶದ ಮಸೀದಿಗಳಿಗೆ ಆದೇಶಿಸಿದೆ. ಮಾತ್ರವಲ್ಲದೇ, ಧ್ವನಿವರ್ಧಕಗಳ ಶಬ್ದವನ್ನು ಗರಿಷ್ಠ ಮಟ್ಟದ ಮೂರನೇ ಒಂದು ಭಾಗಕ್ಕೆ ಸೀಮಿತಗೊಳಿಸಬೇಕು ಎಂದು ಸೂಚಿಸಿದೆ ಎಂದು ಸೌದಿ ಗೆಜೆಟ್ ವರದಿ ಮಾಡಿದೆ.
ಸೌದಿಯ ಇಸ್ಲಾಮಿಕ್ ಅಫೇರ್ಸ್, ಕಾಲ್ & ಗೈಡೆನ್ಸ್ ಸಚಿವ ಶೇಖ್ ಡಾ.ಅಬುಲ್ಲತಿಫ್ ಬಿನ್ ಅಬ್ದುಲಜೀಜ್ ಅಲ್-ಶೇಖ್ ಅವರು ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದ್ದು, ಎಲ್ಲಾ ಮಸೀದಿಗಳು ಸುತ್ತೋಲೆಯಲ್ಲಿನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಪ್ರಾರ್ಥನೆಯ ಸಮಯದಲ್ಲಿ ಮಸೀದಿಗಳು ಹೊರ ಧ್ವನಿವರ್ಧಕಗಳನ್ನು ಬಳಸುತ್ತಿದ್ದು, ಇದರ ಶಬ್ದ ರೋಗಿಗಳು, ವೃದ್ಧರು ಮತ್ತು ಹತ್ತಿರ ವಾಸಿಸುವ ಮಕ್ಕಳಿಗೆ ಹಾನಿಯನ್ನುಂಟು ಮಾಡುತ್ತಿದೆ. ಈ ಕಾರಣದಿಂದಾಗಿ ಸಚಿವಾಲಯ ಈ ಸುತ್ತೋಲೆಯನ್ನು ಹೊರಡಿಸಿದೆ.
ಷರಿಯಾ ನಿಯಮಗಳ ಪ್ರಕಾರ, ಪ್ರಾರ್ಥನೆಯ ಸಮಯದಲ್ಲಿ ಇಮಾಮ್ನ ಧ್ವನಿಯನ್ನು ಮಸೀದಿಯೊಳಗಿನ ಎಲ್ಲರೂ ಕೇಳಬೇಕು. ಆದರೆ ಹೊರಗಿನ ನೆರೆಹೊರೆಯ ಮನೆಗಳಲ್ಲಿನ ಜನರು ಇದನ್ನು ಕೇಳುವ ಅಗತ್ಯವಿಲ್ಲ ಎಂದು ವರದಿ ಹೇಳಿದೆ.
“10 ರಿಂದ 15 ನಿಮಿಷಗಳವರೆಗಿನ ಪ್ರಾರ್ಥನೆಗಳನ್ನು ಸ್ಪೀಕರ್ ಇಟ್ಟು ಜೋರಾಗಿ ಹೇಳಿದರೆ, ಅದು ಮುಸ್ಲಿಮರು ಮತ್ತು ಮುಸ್ಲಿಮೇತರರು ಸೇರಿದಂತೆ ಮಸೀದಿಗಳ ಪಕ್ಕದಲ್ಲಿ ವಾಸಿಸುವವರಿಗೆ ಅನಾನುಕೂಲತೆ ಉಂಟುಮಾಡುತ್ತದೆ” ಎಂದು ನಿವಾಸಿಯೊಬ್ಬರ ಉಲ್ಲೇಖವನ್ನು ವರದಿಯಲ್ಲಿ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.