ನವದೆಹಲಿ: ಅಮೆರಿಕದ ಔಷಧೀಯ ದಿಗ್ಗಜ ಫಿಝರ್ ತನ್ನ ಕೋವಿಡ್ -19 ಲಸಿಕೆಯು 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಸೂಕ್ತವಾಗಿದೆ ಮತ್ತು ಒಂದು ತಿಂಗಳವರೆಗೆ ಇದನ್ನು 2-8 ಡಿಗ್ರಿಗಳಲ್ಲಿ ಸಂಗ್ರಹಿಸಿಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಫಿಝರ್ ಅಧಿಕಾರಿಗಳು ಮತ್ತು ಭಾರತ ಸರ್ಕಾರವು ಲಸಿಕೆಯ ಬಗ್ಗೆ ಮಾತುಕತೆಗಳನ್ನು ನಡೆಸಿದೆ. ಕಂಪನಿಯು ತನ್ನ ಕೋವಿಡ್-19 ಲಸಿಕೆಗಳನ್ನು ಭಾರತಕ್ಕೆ ತರುವ ಮೊದಲು ಕೆಲವು ಷರತ್ತುಗಳಲ್ಲಿ ವಿನಾಯಿತಿ ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಕೆಲವು ಷರತ್ತುಗಳಿದ್ದರೂ 2021 ರಲ್ಲಿ ಭಾರತಕ್ಕೆ 50 ಮಿಲಿಯನ್ ಕೋವಿಡ್ -19 ಲಸಿಕೆಗಳನ್ನು ಪೂರೈಸುವ ಸಾಧ್ಯತೆಯಿದೆ ಎಂದು ಯುಎಸ್ ಔಷಧೀಯ ದೈತ್ಯ ಫಿಝರ್ ಹೇಳಿದೆ. ಆದರೆ ಕೆಲವೊಂದು ಷರತ್ತುಗಳಲ್ಲಿ ವಿನಾಯಿತಿ ನೀಡುವಂತೆ ಕೇಳಿದೆ ಎನ್ನಲಾಗಿದೆ.
ಈ ನಡುವೆ, ಯುಎಸ್ನ ಮತ್ತೊಂದು ಔಷಧೀಯ ದೈತ್ಯ ಮಾಡರ್ನಾ ಕಂಪನಿಯು ಮುಂಬೈ ಮೂಲದ ಸಿಪ್ಲಾ ಎಂಬ ಔಷಧೀಯ ಕಂಪನಿಯೊಂದಿಗೆ ಭಾರತದಲ್ಲಿ ತನ್ನ ಕೋವಿಡ್ -19 ಲಸಿಕೆಗಳನ್ನು ತಯಾರಿಸಲು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.