ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಸರ್ಕಾರಿ ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ 18-44 ವಯಸ್ಸಿನವರಿಗೆ ವಾಕ್-ಇನ್ ವ್ಯಾಕ್ಸಿನೇಷನ್ ನೀಡಲು ಕೇಂದ್ರವು ನಿರ್ಧರಿಸಿದೆ. ಇನ್ನು ಕೋವಿನ್ ಪೋರ್ಟಲ್ನಲ್ಲಿ ಲಸಿಕೆ ಪಡೆಯಲು ನೋಂದಣಿ ಮಾಡಬೇಕಾಗಿಲ್ಲ.
ಭಾರತದಲ್ಲಿ ಈಗಾಗಲೇ 1,06,21,235 ಲಸಿಕೆ ಪ್ರಮಾಣವನ್ನು 18-44 ವಯಸ್ಸಿನವರಿಗೆ ನೀಡಲಾಗಿದೆ. ಇದೀಗ ವಾಕ್ ಇನ್ ಲಸಿಕೆ ನೀಡುವಿಕೆ ಕ್ರಮವು ಅಭಿಯಾನದ ವೇಗವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.
ಲಸಿಕೆ ಹಾಕುವ ದಿನದಂದು ಆನ್ಲೈನ್ ನೋಂದಣಿ ಮಾಡಿಕೊಂಡ ಫಲಾನುಭವಿಗಳು ಹಾಜರಾಗದಿದ್ದಲ್ಲಿ ಲಸಿಕೆ ಡೋಸ್ ವ್ಯರ್ಥವಾಗುತ್ತದೆ ಎಂಬ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದಲ್ಲದೆ, ಹೆಚ್ಚಿನ ಜನರು ಇಂಟರ್ನೆಟ್ ಅಥವಾ ಸ್ಮಾರ್ಟ್ ಫೋನ್ ಅಥವಾ ಮೊಬೈಲ್ ಫೋನ್ ಬಳಕೆ ತಿಳಿಯದೇ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪ್ರಸ್ತುತ, ರಾಜಸ್ಥಾನ (13,17,060) 18-44 ವಯಸ್ಸಿನ ಅತಿ ಹೆಚ್ಚು ಜನರಿಗೆ ಲಸಿಕೆ ನೀಡಿದೆ, ನಂತರದ ಸ್ಥಾನದಲ್ಲಿ ಬಿಹಾರ (12,27,279) ಮತ್ತು ಉತ್ತರ ಪ್ರದೇಶ (10,70,642) ಇವೆ.
On-site registration & appointment is now being enabled for the 18-44 years age group on CoWIN. However, this feature is being enabled only for Government #COVID Vaccination Centers (CVCs), at the present moment in time: Union Ministry of Health and Family Welfare
— ANI (@ANI) May 24, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.