ವಾಷಿಂಗ್ಟನ್: ಕರೋನವೈರಸ್ ಎಂಬ ಮಹಾಮಾರಿ ಚೀನಾದ ಪ್ರಯೋಗಾಲಯದಲ್ಲಿ ಹೊರಹೊಮ್ಮಿದೆ ಎಂಬುದಕ್ಕೆ ಪುಷ್ಟಿ ನೀಡುವ ಮತ್ತೊಂದು ವರದಿ ಬಹಿರಂಗವಾಗಿದೆ. ಕೋವಿಡ್ ಸಾಂಕ್ರಾಮಿಕದ ಪ್ರಕರಣಗಳು ದಾಖಲಾಗುವ ಮುನ್ನವೇ ಚೀನಾದ ವುಹಾನ್ ವೈರಾಣು ಸಂಸ್ಥೆಯ ಮೂವರು ಸಂಶೋಧಕರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಅಮೆರಿಕದ ಗುಪ್ತಚರ ವರದಿಯನ್ನು ಆಧರಿಸಿ ವಾಲ್ ಸ್ಟ್ರೀಟ್ ಜರ್ನಲ್ ತನ್ನ ವರದಿಯನ್ನು ಪ್ರಕಟಿಸಿದೆ. ಕರೋನವೈರಸ್ ಬಗ್ಗೆ ಜಗತ್ತಿಗೆ ತಿಳಿಯುವ ಮುನ್ನವೇ ವುಹಾನ್ ಪ್ರಯೋಗಾಲಯದ ಸಂಶೋಧಕರು ಆಸ್ಪತ್ರೆಗೆ ದಾಖಲಾಗಿದ್ದರು ಎಂಬುದಕ್ಕೆ ಇದು ಸಾಕ್ಷಾಧಾರಗಳನ್ನು ಒದಗಿಸಿದೆ.
ಚೀನಾದ ಎಷ್ಟು ಮಂದಿ ಸಂಶೋಧಕರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ, ಸಂಶೋಧನೆಯ ವೇಳೆ ಎಷ್ಟು ಮಂದಿ ಸಂಶೋಧಕರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಬಗ್ಗೆಯೂ ಇದು ವರದಿ ನೀಡಿದೆ. ಆಸ್ಪತ್ರೆಗೆ ದಾಖಲಾಗಿದ್ದ ಅವಧಿಯನ್ನು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವರದಿಯನ್ನು ಗಮನಿಸಿದರೆ ಕೊರೋನಾ ವೈರಸ್ ಪ್ರಯೋಗಾಲಯ ದಿಂದಲೇ ಹೊರಹೊಮ್ಮಿರುವ ಸಾಧ್ಯತೆಗಳು ಇವೆ, ಹೀಗಾಗಿ ಈ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂಬ ಒತ್ತಾಯಗಳು ಬಲವಾಗಿ ಕೇಳಿಬಂದಿದೆ.
ಆದರೆ ಚೀನಾ ಮಾತ್ರ ವಾಲ್ ಸ್ಟ್ರೀಟ್ಟ್ ಜರ್ನಲ್ ವರದಿಯನ್ನು ನಿರಾಕರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.