ನವದೆಹಲಿ : ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಭಾಗವಾಗಿ, ಭಾರತ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ಒದಗಿಸುವ ಮೂಲಕ ಬೆಂಬಲ ನೀಡುತ್ತಿದೆ. ಇದಲ್ಲದೆ, ಭಾರತ ಸರಕಾರವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆಗಳನ್ನು ನೇರವಾಗಿ ಖರೀದಿಸಲು ಅನುಕೂಲ ಮಾಡಿಕೊಡುತ್ತಿದೆ. ಸಾಂಕ್ರಾಮಿಕದ ನಿಯಂತ್ರಣ ಮತ್ತು ನಿರ್ವಹಣೆಗೆ ಭಾರತ ಸರಕಾರ ಪರೀಕ್ಷೆ, ಪತ್ತೆ, ಚಿಕಿತ್ಸೆ ಮತ್ತು ಕೋವಿಡ್-ಸೂಕ್ತ ನಡವಳಿಕೆ ಸೂತ್ರಗಳನ್ನು ಒಳಗೊಂಡ ಸಮಗ್ರ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದು, ಲಸಿಕೆಯೂ ಇದರ ಅವಿಭಾಜ್ಯ ಅಂಗವಾಗಿದೆ.
ಕೋವಿಡ್-19 ಲಸಿಕೆಯ ಉದಾರೀಕರಣ ಹಾಗೂ ವೇಗವರ್ಧಿತ 3ನೇ ಹಂತದ ಕಾರ್ಯತಂತ್ರದ ಅನುಷ್ಠಾನವು 2021ರ ಮೇ 1 ರಿಂದ ಪ್ರಾರಂಭವಾಗಿದೆ.
ಈ ಕಾರ್ಯತಂತ್ರದ ಅಡಿಯಲ್ಲಿ, ಪ್ರತಿ ತಿಂಗಳಲ್ಲಿ ಯಾವುದೇ ತಯಾರಕರು ಉತ್ಪಾದಿಸುವ ಕೇಂದ್ರ ಔಷಧ ಪ್ರಯೋಗಾಲಯದ (ಸಿಡಿಎಲ್) ಅನುಮೋದನೆ ಪಡೆದ ಲಸಿಕೆಯಲ್ಲಿ ಶೇ. 50ರಷ್ಟು ಡೋಸ್ಗಳನ್ನು ಭಾರತ ಸರಕಾರವು ಖರೀದಿಸುತ್ತದೆ. ರಾಜ್ಯ ಸರಕಾರಗಳಿಗೆ ಈ ಹಿಂದಿನಂತೆಯೇ ಈ ಡೋಸ್ಗಳು ಸಂಪೂರ್ಣ ಉಚಿತವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ.
ಭಾರತ ಸರಕಾರವು ಇಲ್ಲಿಯವರೆಗೆ, ಉಚಿತವಾಗಿ ಮತ್ತು ರಾಜ್ಯ ಸರಕಾರಗಳಿಂದ ನೇರ ಖರೀದಿ ಮಾರ್ಗದ ಮೂಲಕ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 21.80 ಕೋಟಿಗೂ ಹೆಚ್ಚು ಲಸಿಕೆ ಡೋಸ್ಗಳನ್ನು (21,80,51,890) ಒದಗಿಸಿದೆ.
ಇದರಲ್ಲಿ, ಮೇ 22 2021ರವರೆಗಿನ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ ವ್ಯರ್ಥವಾದ ಡೋಸ್ಗಳೂ ಸೇರಿದಂತೆ ಒಟ್ಟು 19,90,31,577 ಡೋಸ್ಗಳನ್ನು ಬಳಕೆ ಮಾಡಲಾಗಿದೆ (ಇಂದು ಬೆಳಿಗ್ಗೆ 8 ಗಂಟೆಗೆ ಲಭ್ಯವಿರುವ ದತ್ತಾಂಶದ ಪ್ರಕಾರ).
ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ನೀಡಲು ಇನ್ನೂ 1. 90 ಕೋಟಿಗಿಂತಲೂ ಅಧಿಕ (1,90,20,313) ಡೋಸ್ಗ ಳು ಲಭ್ಯವಿವೆ. ಇದಲ್ಲದೆ, ಇನ್ನೂ 40,650 ಲಸಿಕೆ ಡೋಸ್ಗಳು ಸಾಗಣೆ ಹಂತದಲ್ಲಿದ್ದು ಮುಂದಿನ 3 ದಿನಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.